ಚೀನಾದ BRI ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಭಾರತ!

masthmagaa.com:

ಚೀನಾದ ಪ್ರಮುಖ Belt and Road Initiative (BRI) ಯೋಜನೆಗೆ ಭಾರತ ಮತ್ತೊಮ್ಮೆ ತನ್ನ ವಿರೋಧ ವ್ಯಕ್ತಪಡಿಸಿದೆ. ಭಾರತದ ಸಾರ್ವಭೌಮತೆ ಹಾಗೂ ಸಮಗ್ರತೆಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನ ಕಾರ್ಯರೂಪಕ್ಕೆ ತರೋಕೆ ಚೀನಾ ಮುಂದಾಗಿದೆ. ಹೀಗಾಗಿ ಮೊದ್ಲಿನಿಂದಲೂ ಭಾರತ ಈ ಯೋಜನೆಯನ್ನ ವಿರೋಧಿಸುತ್ತಾ ಬಂದಿದೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ. ಇದೇ ವೇಳೆ ಈ ವರ್ಷ ನಮಗೆ BRI ಫೋರಮ್‌ನ ಸಭೆಗೆ ಆಹ್ವಾನ ಬಂದಿಲ್ಲ ಅಂತ ತಿಳಿಸಿದ್ದಾರೆ. ಅಂದ್ಹಾಗೆ ‌ಜಿ20 ಶೃಂಗಸಭೆಗೆ ಗೈರಾಗಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, BRI ಫೋರಮ್ ಸಭೆಗೆ ಹೋಗಿದ್ರಲ್ಲ. ಇದಕ್ಕೇನ್‌ ಹೇಳ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿರೋ ಬಗ್ಚಿ, ‘ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳೋದನ್ನ ಇತರ ಸಂಗತಿಗಳಿಗೆ ಹೋಲಿಸುವುದನ್ನ ಭಾರತ ಒಪ್ಪುವುದಿಲ್ಲ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply