ಲೋಕಸಭಾ ಚುನಾವಣೆ ಬಗ್ಗೆ ವಿಶ್ವಸಂಸ್ಥೆ ಹೇಳಿಕೆ ಖಂಡಿಸಿದ ಭಾರತ!

masthmagaa.com:

ಭಾರತದಲ್ಲಿ ಮುಂಬರೋ ಲೋಕಸಭಾ ಚುನಾವಣೆ ವಿಚಾರವಾಗಿ ವಿಶ್ವಸಂಸ್ಥೆ ನೀಡಿರೋ ಹೇಳಿಕೆಯನ್ನ ಭಾರತ ತೀವ್ರವಾಗಿ ಖಂಡಿಸಿದೆ. ಭಾರತದಲ್ಲಿ ಚುನಾವಣೆ ಹೊತ್ತಲ್ಲಿ ಅಲ್ಪಸಂಖ್ಯಾತರು…ಪ್ರಮುಖವಾಗಿ ಮುಸ್ಲಿಂರ ಮೇಲೆ ದಬ್ಬಾಳಿಕೆ ಆಗ್ತಿದೆ ಅಂತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಷನರ್‌ ವೋಲ್ಕರ್‌ ಹೇಳಿಕೆ ಕೊಟ್ಟಿದ್ರು. ಈ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿಯಾಗಿರೋ ಅರಿಂದಮ್‌ ಬಾಗ್ಚಿ, ವೋಲ್ಕರ್‌ ಟರ್ಕ್‌ರನ್ನ ತರಾಟೆಗೆ ತಗೊಂಡಿದ್ದಾರೆ. ʻಗ್ಲೋಬಲ್‌ ಅಪ್‌ಡೇಟ್‌ ನೀಡಿರೋ ಹೈ ಕಮಿಷನರ್‌ಗೆ ಧನ್ಯವಾದಗಳು. ನಮ್ಮ ಮುಂಬರೋ ಸಾರ್ವತ್ರಿಕ ಚುನಾವಣೆ ಬಗ್ಗೆ ಇವ್ರು ಕಮೆಂಟ್‌ ಮಾಡಿರೋದು ನಾನು ಗಮನಿಸಿದ್ದೇನೆ. ಈ ವಿಷಯದಲ್ಲಿ ಅವ್ರ ಕಳವಳ ಅಸಮರ್ಥನೀಯವಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವಾಸ್ತವತೆಯನ್ನ ಇದು ಪ್ರತಿಬಿಂಬಿಸೋದಿಲ್ಲʼ ಅಂತ ಮಾನವ ಹಕ್ಕುಗಳ ಸಂಸ್ಥೆಯ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply