ದೇಶದಲ್ಲಿ 24 ಗಂಟೇಲಿ ಎಷ್ಟು ಜನರಿಗೆ ಕೊರೋನಾ? ಎಷ್ಟು ಜನರಿಗೆ ಲಸಿಕೆ?

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11,666 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, 123 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ 7 ಲಕ್ಷದ 1 ಸಾವಿರ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1,53,847ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 14,000ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1 ಕೋಟಿ 3 ಲಕ್ಷದ 73 ಸಾವಿರ ದಾಟಿದೆ. ದೇಶದಲ್ಲಿ ಇನ್ನೂ ಕೂಡ 1 ಲಕ್ಷದ 73 ಸಾವಿರ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 96.93 ಪರ್ಸೆಂಟ್ ಇದ್ದು, ಸಾವಿನ ಪ್ರಮಾಣ 1.43 ಪರ್ಸೆಂಟ್ ಇದೆ. ಜನವರಿ 27ರಂದು 7.25 ಲಕ್ಷ ಕೊರೋನಾ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 19.43 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ.

ದೇಶದಲ್ಲಿ ನಿನ್ನೆ 3.26 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದ್ದು, ಇದುವರೆಗೆ ಒಟ್ಟು 23.55 ಲಕ್ಷ ಜನರಿಗೆ ಲಸಿಕೆ ಹಾಕಿದಂತಾಗಿದೆ.

-masthmagaa.com

Contact Us for Advertisement

Leave a Reply