ಪಾಕ್‌‌ಗೆ ಹೊಡೆದಿದ್ದು ಸರಿ!? ಇರಾನ್‌ಗೆ ಭಾರತ ಸೈಲೆಂಟ್ ಬೆಂಬಲ!

masthmagaa.com

ಇರಾನ್‌ ದಾಳಿ ನಂತ್ರ ತನ್ನ ಮಾನ ಉಳಿಸಿಕೊಳ್ಳೋಕೆ ಮಾಡು ಇಲ್ವೇ ಮಡಿ ಅನ್ನೋ ಸ್ಥಿತೀಲಿದ್ದ ಪಾಕಿಸ್ತಾನ ಕೊನೆಗೂ ಧೈರ್ಯ ಮಾಡಿ ಇರಾನ್‌ ಮೇಲೆ ದಾಳಿ ಮಾಡೇ ಬಿಟ್ಟಿದೆ. ಮುಂದೆ ಏನಾಗುತ್ತೋ ಗೊತ್ತಿಲ್ಲ, ಆದ್ರೆ ಈಗ್‌ ಮಾತ್ರ ಆಗಿದ್ದಾಗ್ಲಿ ಅಂತ ರೊಚ್ಚಿಗೆದ್ದು ಏರ್‌ಸ್ಟ್ರೈಕ್‌ ಮಾಡಿದೆ. `marg bar sarmachar’ ಅಂದ್ರೆ ಪರ್ಶಿಯನ್‌ ಭಾಷೆಯಲ್ಲಿ ದಾಳಿಕೋರರಿಗೆ ಧಿಕ್ಕಾರ ಅನ್ನೋ ಅರ್ಥ ಬರೋ ಹೆಸರಿಟ್ಕೊಂಡು ಆಪರೇಷನ್‌ ನಡೆಸಿದೆ. ಯಾಕಂದ್ರೆ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನ್‌ ಟೈಮಲ್ಲಿ ಇಸ್ರೇಲ್‌, ಅಮೆರಿಕ ವಿರುದ್ಧದ ಈ ಘೋಷಣೆ ಫೇಮಸ್ಸಾಗಿತ್ತು. ಈಗ ಅದೇ ಹೆಸರಲ್ಲಿ ಇರಾನ್‌ನಲ್ಲಿರೋ ಬಲೊಚಿಸ್ತಾನ್‌ ಪ್ರಾಂತ್ಯದ ಮಿಲಿಟೆಂಟ್‌ ಗ್ರೂಪ್‌ಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ. ಖುದ್ದು ಪಾಕ್‌ ಇಂಟಲೆಜೆನ್ಸ್‌ ಈ ಬಗ್ಗೆ ಮಾಹಿತಿ ನೀಡಿದೆ. ಬಲೋಚಿಸ್ತಾನ್‌ ಲಿಬರೇಷನ್‌ ಫ್ರಂಟ್‌ ಹಾಗೂ ಲಿಬರೇಷನ್‌ ಆರ್ಮಿ ಅನ್ನೋ ಪ್ರತ್ಯೇಕತಾವಾದಿ ಸಂಘಟನೆಗಳನ್ನ ಟಾರ್ಗೆಟ್‌ ಮಾಡಿ ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಮೂವರು ಮಹಿಳೆಯರು, ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಇವ್ರ್ಯಾರು ಇರಾನ್‌ ಪ್ರಜೆಗಳಾಗಿರ್ಲಿಲ್ಲ ಅಂತ ತಿಳಿದು ಬಂದಿದೆ. ಇನ್ನು ಮಂಗಳವಾರ ಇರಾನ್‌ ಪಾಕ್‌ ಮೇಲೆ ಮಾಡಿದ್ದ ದಾಳಿ ಬಗ್ಗೆ ಭಾರತ ಇರಾನ್‌ಗೆ ಸಪೋರ್ಟ್‌ ಮಾಡೋ ರೀತಿಲಿ ರಿಯಾಕ್ಟ್‌ ಮಾಡಿದೆ. ಡೈರೆಕ್ಟಾಗಿ ಆಪೋಸ್‌ ಅಂತು ಮಾಡಿಲ್ಲ, ಪಾಕ್‌ ಸಾರ್ವಭೌಮತೆಗೆ ಧಕ್ಕೆ ಆಗಿದೆ ಹಂಗೆ ಹಿಂಗೆ ಅಂತ ಹೇಳಿಲ್ಲ. ಈವನ್‌ ಚೀನಾ ಕೂಡ ಡೈರೆಕ್ಟಾಗಿ ಆಪೋಸ್‌ ಮಾಡಿಲ್ಲ… ಭಾರತ, ಇದು ಪಾಕ್-ಇರಾನ್‌ಗಳ ಆಂತರಿಕ ವಿಚಾರ. ಆದ್ರೆ ನಾವು ಭಯೋತ್ಪಾದನೆಯನ್ನ ಯಾವತ್ತೂ ಸಹಿಸಿಲ್ಲ… ಸಹಿಸಲ್ಲ. ಬಟ್ ಕೆಲವು ದೇಶಗಳು ತಮ್ಮ ರಕ್ಷಣೆಗೋಸ್ಕರ ತಗೊಳ್ಳೋ ಕ್ರಮಗಳನ್ನ ನಮ್ಗೆ ಅರ್ಥ ಆಗುತ್ತೆ..‌ ಇರಾನ್‌ ಮಾಡಿರೋದ್ರಲ್ಲಿ ತಪ್ಪೇನಿಲ್ಲ ಅನ್ನೋ ರೀತಿ ಹೇಳಿದೆ. ಇನ್ನು ಪಾಕ್‌ ಅಣ್ಣಯ್ಯ ಚೀನಾ, ʻಇರಾನ್‌, ಪಾಕಿಸ್ತಾನ್‌ಗಳು ಮೇಜರ್‌ ಇಸ್ಲಾಮಿಕ್‌ ದೇಶಗಳು. ಇಬ್ಬರೂ ಪರಿಸ್ಥಿತಿನ ಎಸ್ಕಲೇಟ್‌ ಮಾಡೋದನ್ನ ಅವಾಯ್ಡ್‌ ಮಾಡ್ಬೇಕು. ಸ್ವಲ್ಪ ಸಮಾಧಾನ್ವಾಗಿದ್ದು ಈ ಪ್ರದೇಶದಲ್ಲಿ ಶಾಂತಿ ಕಾಪಾಡ್ಬೇಕು ಅಂತೇಳಿದೆ. ಇನ್ನು ಅತ್ತ ಮಾಜಿ ದೊಡ್ಡಣ್ಣ ಅಮೆರಿಕ ಕೂಡ, ಪಾಕ್‌ ಜೊತೆಗೆ ಸಿರಿಯಾ, ಇರಾಕ್‌ ಮೇಲಿನ ದಾಳಿಗಳನ್ನ ಸೇರಿಸಿ ಇರಾನ್‌ಗೆ ಕೆಂಡಕಾರಿದೆ. ಇರಾನ್‌ ಮೂರು ದೇಶಗಳ ಸಾರ್ವಭೌಮತೆಗೆ ಧಕ್ಕೆ ತಂದಿದೆ. ಇದನ್ನ ಅಮೆರಿಕ ಖಂಡಿಸುತ್ತೆ ಅಂತ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ಮ್ಯಾಥಿವ್‌ ಮಿಲ್ಲರ್‌ ಹೇಳಿದ್ದಾರೆ. ಇನ್ನು ಈ ದಾಳಿಗೂ ಮುಂಚೆ ಇರಾನ್‌ನ ಸಿಸ್ತಾನ್‌-ಬಲೋಚಿಸ್ತಾನ್‌ ಪ್ರಾಂತ್ಯದಲ್ಲಿ ಪಾಕ್‌ ಗಡಿ ಬಳಿನೇ ಇರಾನ್‌ ರೆವೊಲ್ಯೂಷನರಿ ಗಾರ್ಡ್‌ನ ಸದಸ್ಯರೊಬ್ರನ್ನ ಹತ್ಯೆ ಮಾಡಲಾಗಿದೆ.)ಇದ್ರ ಬೆನ್ನಲ್ಲೇ ಪಾಕ್‌ ಮತ್ತೊಮ್ಮೆ ಇರಾನ್‌ ಮೇಲೆ ದಾಳಿ ನಡೆಸಿದೆ. ಇದ್ರ ಮಧ್ಯೆ ಪಾಕ್‌ ಹಂಗಾಮಿ ಪ್ರಧಾನಿ ಅನ್ವರುಲ್‌ ಹಕ್‌ ಕಕ್ಕರ್‌ WEF ಮೀಟಿಂಗನ್ನ ಮೊಟಕುಗೊಳಿಸಿ ವಾಪಸ್‌ ಪಾಕ್‌ಗೆ ಬಂದಿದ್ದಾರೆ. ಇತ್ತ ಪಾಕ್‌ನ ಷೇರುಪೇಟೆಯಲ್ಲೂ ಕುಸಿತ ಕಂಡಿದೆ.

-masthmagaa.com

Contact Us for Advertisement

Leave a Reply