ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ ಭಾರತ! ಯಾಕೆ?

masthmagaa.com:

ಇತ್ತೀಚೆಗೆ ಸ್ವಿಡನ್‌ನಲ್ಲಿ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್‌ ಅನ್ನ ಸುಟ್ಟು ಹಾಕಿ ವ್ಯಕ್ತಿಯೊಬ್ಬ ಪ್ರತಿಭಟನೆ ಮಾಡಿದ್ದು, ಜಾಗತಿಕವಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಕೃತ್ಯವನ್ನ ಖಂಡಿಸಿ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಮಂಡಿಸಿರೋ ನಿರ್ಣಯಕ್ಕೆ ಭಾರತ ಸಪೋರ್ಟ್‌ ಮಾಡಿದೆ. ಯಾವಾಗಲೂ ಭಾರತಕ್ಕೆ ತೊಂದ್ರೆ ಕೊಡೋಕೆ ಟ್ರೈ ಮಾಡುವ ಪಾಕಿಸ್ತಾನಕ್ಕೆ ಭಾರತ ಬೆಂಬಲ ನೀಡಿದೆ. ಧಾರ್ಮಿಕ ದ್ವೇಷದ ವಿರುದ್ಧ ಮಂಡಿಸಿರೋ ನಿರ್ಣಯಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಅನುಮೋದನೆ ನೀಡಿದೆ. ಈ ನಿರ್ಣಯದ ಪರವಾಗಿ ಭಾರತ, ಚೀನಾ, ದಕ್ಷಿಣ ಆಫ್ರಿಕಾ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳು ಸೇರಿದಂತೆ ಒಟ್ಟು 28 ದೇಶಗಳು ಮತಹಾಕಿವೆ. ಆದ್ರೆ ಅಮೆರಿಕ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌ ಸೇರಿದಂತೆ 12 ರಾಷ್ಟ್ರಗಳು ನಿರ್ಣಯದ ವಿರುದ್ಧ ಮತಹಾಕಿವೆ.

-masthmagaa.com

Contact Us for Advertisement

Leave a Reply