ಖಲಿಸ್ತಾನಿ ಉಗ್ರ ಪನ್ನುನ್‌ಗೆ ಸ್ಕೆಚ್!‌ ಭಾರತ ಹೇಳಿದ್ದೇನು?

masthmagaa.com:

ನಿನ್ನೆಯಷ್ಟೆ ಕೆನಡಾದ ಖಲಿಸ್ತಾನಿ ಉಗ್ರ ಗುರ್‌ಪತ್ವಂತ್‌ ಸಿಂಗ್‌ ಪನ್ನುನ್‌ಗೆ ಟಿಕೆಟ್‌ ನೀಡೋಕೆ ಅಮೆರಿಕದಲ್ಲಿ ಭಾರತದ ಗುಪ್ತಚರ ಏಜೆಂಟ್‌ಗಳು ಪ್ಲಾನ್‌ ಮಾಡಿದ್ರ ಅನ್ನೊ ಸುದ್ಧಿ ಹರಿದಾಡಿತ್ತು. ಇದೀಗ ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂಧಮ್ ಬಗ್ಚಿ ರಿಪ್ಲೈ ಮಾಡಿದ್ದಾರೆ. “ಇತ್ತೀಚೆಗೆ ನಡೆದ ಭಾರತ-ಅಮೆರಿಕ ನಡುವಿನ ಭದ್ರತಾ ಮಾತುಕತೆ ವೇಳೆ ಅಮೆರಿಕ ಈ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಮೆರಿಕದಲ್ಲಿನ ಸಂಘಟಿತ ಕ್ರಿಮಿನಲ್‌ಗಳು, ಬಂದೂಕುದಾರಿಗಳು ಹಾಗೂ ಉಗ್ರರ ಕುರಿತಾದ ಕೆಲವು ಮಾಹಿತಿಗಳನ್ನ ನೀಡಿದ್ರು. ಅಲ್ಲದೆ ಅಮೆರಿಕ ಈ ವಿಷಯವಾಗಿ ಬಹಳ ಸೀರಿಯಸ್ಸಾಗಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳತ್ತೆ ಅಂತ ಹೇಳಿದ್ರು. ಇನ್ನು ಅಮೆರಿಕ ನೀಡಿದ್ದ ಇನ್‌ಪುಟ್ಸ್‌ ವಿಚಾರವಾಗಿ, ಸಂಬಂಧಿತ ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ.” ಅಂದಿದ್ದಾರೆ. ಅಂದ್ಹಾಗೆ ಬಗ್ಚಿ ನೀಡಿರೋ ಸ್ಟೇಟ್‌ಮೆಂಟ್‌ನ್ನ ಗಮನಿಸಿದ್ರೆ ಅಮೆರಿಕ ನೀಡಿರೋ ‌ʻಇನ್‌ಪುಟ್ಸ್ʼ ಅಥ್ವಾ ಮಾಹಿತಿಗಳಲ್ಲಿ ಪನ್ನುನ್‌ನ ಎಲಿಮಿನೇಟ್‌ ಮಾಡೋಕೆ ಭಾರತೀಯ ಕಾಣದ ಕೈಗಳು ಯತ್ನಿಸಿದ್ವು ಅನ್ನೋದು ಕ್ಲಿಯರ್‌ ಆದಂತಾಗಿದೆ. ಆದ್ರೆ ಎಲ್ಲಿ, ಹೇಗೆ ಸ್ಕೆಚ್‌ ಹಾಕಿದ್ರು ಅನ್ನೊ ಮಾಹಿತಿ ಇಲ್ಲ. ಅಲ್ದೆ ಬಗ್ಚಿ ಕೂಡ ʻಪನ್ನುನ್‌ʼ ಹೆಸರನ್ನ ಎಲ್ಲೂ ತೆಗೆದುಕೊಳ್ಳದೇ ಮಾತಾಡಿದ್ದಾರೆ.

-masthmagaa.com

Contact Us for Advertisement

Leave a Reply