ಮೂರು ವರ್ಷದಲ್ಲಿ ಭಾರತ 5 ಟ್ರಿಲಿಯನ್‌ ಆರ್ಥಿಕತೆ: ಸರ್ಕಾರ

masthmagaa.com:

ಮುಂದಿನ ಮೂರು ವರ್ಷಗಳಲ್ಲಿ ಭಾರತ 5 ಟ್ರಿಲಿಯನ್‌ ಆರ್ಥಿಕತೆ ಆಗುತ್ತೆ. ಅಲ್ಲದೇ ವಿಶ್ವದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಅಂತ ಕೇಂದ್ರ ಸರ್ಕಾರ ಹೇಳಿದೆ. ದೇಶದ ಆರ್ಥಿಕತೆ ಕುರಿತು ಹಣಕಾಸು ಇಲಾಖೆ ಪ್ರಕಟಿಸಿರುವ ವರದಿಯಲ್ಲಿ ಈ ರೀತಿ ಹೇಳಿದೆ. ಅಲ್ಲದೇ 2030ರ ವೇಳೆಗೆ ಜಿಡಿಪಿ 7 ಲಕ್ಷ ಟ್ರಿಲಿಯನ್‌ ತಲುಪುತ್ತೆ ಅಂತ ಕೇಂದ್ರ ಹಣಕಾಸು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. ಇದು ಸಾಧ್ಯವಾದಲ್ಲಿ 3ನೇ ಸ್ಥಾನದಲ್ಲಿರುವ ಜರ್ಮನಿ ಹಾಗೂ 4ನೇ ಸ್ಥಾನದಲ್ಲಿರುವ ಜಪಾನ್‌ ದೇಶಗಳನ್ನು ಭಾರತ ಹಿಂದಿಕ್ಕಿದಂತಾಗಲಿದೆ. ಇದೆ ವೇಳೆ ವಿತ್ತ ಸಚಿವಾಲಯ, 2023-24ರಂತೆ 2025ರ ಹಣಕಾಸು ವರ್ಷದಲ್ಲಿ ಕೂಡ 7% ದರದಲ್ಲೇ ಆರ್ಥಿಕತೆ ಬೆಳವಣಿಗೆಯಾಗಲಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply