ಜನವರಿ 2ಕ್ಕೆ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಲಸಿಕೆಯ ‘ಡ್ರೈ ರನ್’

masthmagaa.com:

ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನವರಿ 2ರಂದು ಅಂದ್ರೆ ಶನಿವಾರ ‘ಡ್ರೈ ರನ್’ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಡ್ರೈ ರನ್ ಅಂದ್ರೆ ಕೊರೋನಾ ಲಸಿಕೆಯನ್ನ ಹಾಕೋದ್ರಿಂದ ಹಿಡಿದು ಇಡೀ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದನ್ನ ಚೆಕ್​ ಮಾಡಲು ನಡೆಸುವ ಮಾಕ್​ ಟೆಸ್ಟ್. ಇದೊಂಥರ ಲಸಿಕೆ ಹಾಕುವ ಸಿಬ್ಬಂದಿಗೆ ಟ್ರೈನಿಂಗ್ ರೀತಿ ಇರುತ್ತೆ. ಇತ್ತೀಚೆಗೆ ಅಸ್ಸಾಂ, ಆಂಧ್ರಪ್ರದೇಶ, ಪಂಜಾಬ್ ಮತ್ತು ಗುಜರಾತ್​ಗಳಲ್ಲಿ 2 ದಿನ ಡ್ರೈ ರನ್ ನಡೆಸಲಾಗಿತ್ತು. ಇದೀಗ ಎಲ್ಲಾ ರಾಜ್ಯದ ರಾಜಧಾನಿಗಳಲ್ಲಿ ಕನಿಷ್ಠ 3 ಕಡೆ ಡ್ರೈ ರನ್ ನಡೆಸಬೇಕಿದೆ. ಇದಕ್ಕೆ ಬೇಕಿದ್ರೆ ಬೇರೆ ಜಿಲ್ಲೆಗಳನ್ನ ಕೂಡ ಸೇರಿಸಿಕೊಳ್ಳಬಹುದು. ಈ ಮೂಲಕ ಶೀಘ್ರದಲ್ಲೇ ಭಾರತದಲ್ಲಿ ಕೊರೋನಾ ಲಸಿಕೆಗೆ ಅನುಮೋದನೆ ಸಿಗುವ ಬಗ್ಗೆ ಸಿಗ್ನಲ್ ಕೊಟ್ಟಿದೆ ಕೇಂದ್ರ ಸರ್ಕಾರ. ಇನ್ನು ಕೊರೋನಾ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ 83 ಕೋಟಿ ಸಿರಿಂಜ್​ಗಳನ್ನ ಶೇಖರಿಸಿಟ್ಟಿದೆ. ಹೆಚ್ಚುವರಿಯಾಗಿ 35 ಕೋಟಿ ಸಿರಿಂಜ್​ಗಳಿಗೆ ಟೆಂಡರ್ ಕರೆದಿದೆ.

-masthmagaa.com

Contact Us for Advertisement

Leave a Reply