masthmagaa.com:

ಕೊರೋನಾ ಹಿನ್ನೆಲೆ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಕ್ರಿಕೆಟ್​ ಟೂರ್ನಿಯು 2022ಕ್ಕೆ ಮುಂದೂಡಿಕೆಯಾಗಿದೆ. 2022ರಲ್ಲಿ ಆಸ್ಟ್ರೇಲಿಯಾದಲ್ಲೇ ಪಂದ್ಯಾವಳಿ ನಡೆಯಲಿದೆ. ಜೊತೆಗೆ 2021ರ ಟಿ-20 ವಿಶ್ವಕಪ್ ಟೂರ್ನಿಯು ಈಗಾಗಲೇ ನಿಗದಿಪಡಿಸಿದಂತೆ ಭಾರತದಲ್ಲೇ ನಡೆಯಲಿದೆ ಅಂತ ಐಸಿಸಿ ಖಚಿತಪಡಿಸಿದೆ. ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ನ ಆತಿಥ್ಯವನ್ನು ಭಾರತ ಉಳಿಸಿಕೊಂಡಿದೆ.

ಇನ್ನು 2021ರಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯು 2022ಕ್ಕೆ ಮುಂದೂಡಿಕೆಯಾಗಿದೆ ಅಂತ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್​ ತಿಳಿಸಿದೆ.

-masthmagaa.com

Contact Us for Advertisement

Leave a Reply