ಕೊನೆಗೂ ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆ ಔಟ್?‌ ಹೊಸ ಒಪ್ಪಂದ!

masthmagaa.com:

ಹಲವು ಸುತ್ತುಗಳ ಮಾತುಕತೆ ನಂತರ ಇದೀಗ ಭಾರತ, ಮಾಲ್ಡೀವ್ಸ್‌ಗಳು ಇಬ್ಬರಿಗೂ ವರ್ಕ್‌ ಆಗೋ ರೀತಿ ಒಂದು ಪರಿಹಾರ ಕಂಡುಕೊಂಡಿವೆ. ಇಂಡಿಯನ್‌ ಆರ್ಮಿ ಮಾಲ್ಡೀವ್ಸ್‌ ಬಿಟ್ಟು ಹೋಗ್ಬೇಕು ಅಂತ ಬಾವುಟ ಹಿಡಿದಿದ್ದ ಮಾಲ್ಡೀವ್ಸ್‌ಗೆ, ಭಾರತ ಆರ್ಮಿಯನ್ನ ವಾಪಸ್‌ ಕರೆಸಿಕೊಳ್ಳೋ ಸುಳಿವು ನೀಡಿದೆ. ಈಗಾಗಿರೋ ಒಪ್ಪಂದದಲ್ಲಿ ಎರಡು ಸುತ್ತುಗಳಲ್ಲಿ ಅಲ್ಲಿರೋ ಭಾರತೀಯ ಸಿಬ್ಬಂದಿಯನ್ನ ʻರೀಪ್ಲೇಸ್‌ʼ ಮಾಡೋಕೆ ಭಾರತ ಒಪ್ಕೊಂಡಿದೆ. ಮಾರ್ಚ್‌ 10ರೊಳಗೆ ಒಂದು ಗುಂಪು, ಮೇ 10ರೊಳಗೆ ಇನ್ನೊಂದು ಗುಂಪಿನ ಸೈನಿಕರು ರೀಪ್ಲೇಸ್‌ ಆಗ್ಲಿದ್ದಾರೆ. ಆದ್ರೆ ಈ ʻರೀಪ್ಲೇಸ್‌ʼಗೆ ಅರ್ಥ ಏನು? ಅಲ್ಲಿರೋ ಸೈನಿಕರ ಬದಲಿಗೆ ಬೇರೆ ಸೈನಿಕರು ಹೋಗ್ತಾರ? ಅಥ್ವಾ ಇದು ಸೈನಿಕರನ್ನ ಹಂತಹಂತವಾಗಿ ವಾಪಸ್‌ ಕರೆಸಿಕೊಳ್ಳೋ ಒಪ್ಪಂದಾನ ಅನ್ನೋ ಬಗ್ಗೆ ನೇವಿ ಕ್ಲಾರಿಟಿ ಕೊಟ್ಟಿಲ್ಲ. ಆದ್ರೆ ಇದು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್ ಮುಯಿಝು ಡಿಮ್ಯಾಂಡ್‌ನಂತೆ ಸೈನಿಕರನ್ನ ಖಾಲಿ ಮಾಡಿಸೋ ಒಪ್ಪಂದ ಅಂತೇಳಲಾಗ್ತಿದೆ. ಅವ್ರ ಬದಲಾಗಿ ಮಾಲ್ಡೀವ್ಸ್‌ಗೆ ಮಾನವೀಯ, ವೈದ್ಯಕೀಯ ನೆರವು ಒದಗಿಸೋ ನಾಗರೀಕರನ್ನ ಅಥವಾ ಮಾಜಿ ಸೈನಿಕರನ್ನ ಕಳಿಸೋ ಸಾಧ್ಯತೆ ಇದೆ ಅಂತೇಳಲಾಗ್ತಿದೆ. ಮೋಸ್ಟ್ಲಿ ಅದೇ ಈ ʻರೀಪ್ಲೇಸ್‌ʼಗೆ ಅರ್ಥ. ಇನ್ನು ಸದ್ಯ ಇಂಡಿಯನ್‌ ನೇವಿಯ ಎರಡು ಚಾಪರ್‌ಗಳು, ಒಂದು ಡೋರ್ನಿಯರ್‌ ಏರ್‌ಕ್ರಾಫ್ಟ್‌, ಮಾಲ್ಡೀವ್ಸ್‌ನಲ್ಲೇ ಉಳಿಯಲಿವೆ.

-masthmagaa.com

Contact Us for Advertisement

Leave a Reply