ಭಾರತ ನಮಗೆ ಅತ್ಯಂತ ಇಂಪಾರ್ಟೆಂಟ್‌ ಪಾರ್ಟ್ನರ್‌ ಎಂದ ಅಮೆರಿಕ!

masthmagaa.com:

ಭಾರತವನ್ನ ನಾವು ಇಂಪಾರ್ಟೆಂಟ್‌ ಪಾರ್ಟ್ನರ್‌ ಅಂತ ಕನ್ಸಿಡರ್‌ ಮಾಡ್ತೀವಿ ಅಂತ ಅಮೆರಿಕ ಮತ್ತೊಮ್ಮೆ ಪುನರುಚ್ಚಾರ ಮಾಡಿದೆ. ಅಮೆರಿಕ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಡೆಪ್ಯುಟಿ ಸ್ಪೋಕ್‌ ಪರ್ಸನ್‌ ಭಾರತ ಮೂಲದ ವೇದಾಂತ್‌ ಪಟೇಲ್‌ ಈ ಬಗ್ಗೆ ಮಾತನಾಡಿದ್ದಾರೆ. ಭಾರತ ಹಲವಾರು ಕ್ಷೇತ್ರಗಳಲ್ಲಿ ಅಮೆರಿಕಗೆ ಇರೋ ಪ್ರಮುಖ ಪಾಲುದಾರ…ಇದು ವ್ಯಾಪಾರ ಕ್ಷೇತ್ರದಲ್ಲೂ, ಸ್ಟಾಟಜಿಕ್‌ ಕ್ಷೇತ್ರದಲ್ಲೂ, ವೈಜ್ಞಾನಿಕ ಕ್ಷೇತ್ರದಲ್ಲೂ ಮುಂದುವರೆದಿದೆ..ಹೀಗಾಗಿ ಭಾರತ ಜೊತೆಗಿನ ಸಂಬಂಧ ನಮಗೆ ತುಂಬಾ ಮುಖ್ಯ ಅಂತ ವೇದಾಂತ್ ಹೇಳಿದ್ದಾರೆ.‌ ಜೊತೆಗೆ ಚೀನಾ ಹಾಗೂ ಭಾರತದ ಗಡಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ನಾವು ಗಮನಹರಿಸಿದ್ದೇವೆ. ಆ ಗಡಿಯಲ್ಲಿ ಆಗ್ತಿರೋ ಬೆಳವಣಿಗೆಗಳನ್ನ ತುಂಬಾ ಹತ್ತಿರದಿಂದ ಮಾನಿಟರ್‌ ಮಾಡ್ತಿದ್ದೀವಿ ಅಂತ ವೇದಾಂತ್‌ ಪಟೇಲ್‌ ಹೇಳಿದ್ದಾರೆ. ಭಾರತದ NSA ಅಜಿತ್ ದೋವಲ್ ಅವರು ಜನವರಿ 31ರಂದು ಅಮೆರಿಕದ NSA ಜೇಕ್ ಸಲ್ಲಿವಾನ್ ಅವರ ಜೊತೆಗೆ, ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್ (iCET) ನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಅಮೆರಿಕದಲ್ಲಿ ನಡೆಯಲಿದೆ. ಇದಕ್ಕೂ ಮುನ್ನವೇ ಅಮೆರಿಕ ಭಾರತದ ಕುರಿತು ಈ ಹೇಳಿಕೆ ನೀಡಿದೆ.

-masthmagaa.com

Contact Us for Advertisement

Leave a Reply