masthmagaa.com:

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಆರಂಭವಾಗಿರುವ 2ನೇ ಟೆಸ್ಟ್​ನ ಮೊದಲ ದಿನದ ಆಟ ಮುಗಿದಿದೆ. ಟಾಸ್ ವಿನ್ ಆಗಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 195 ರನ್​ಗೆ ಆಲೌಟ್​ ಆಯ್ತು. ಆಸ್ಟ್ರೇಲಿಯಾ ಪರ ಲಬುಷೇನ್ ಅತ್ಯಧಿಕ 48 ರನ್ ಬಾರಿಸಿದ್ರು. ಭಾರತ ಪರ ಬೂಮ್ರಾ 4, ಅಶ್ವಿನ್ 3, ಸಿರಾಜ್ 2 ಮತ್ತು ಜಡೇಜಾ 1 ವಿಕೆಟ್ ಪಡೆದು ಮಿಂಚಿದ್ರು. ನಂತರ ಮೊದಲ ಇನ್ನಿಂಗ್ಸ್​ ಆರಂಭಿಸಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತವಾಯ್ತು. ಆರಂಭಿಕ ಆಟಗಾರ ಮಯಾಂಕ್ ಅಗರ್​ವಾಲ್​ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ರು. ಮೊದಲ ದಿನದ ಅಂತ್ಯಕ್ಕೆ ಭಾರತ 1 ವಿಕೆಟ್​ ಕಳೆದುಕೊಂಡು 36 ರನ್ ಬಾರಿಸಿದೆ. 28 ರನ್​ನೊಂದಿಗೆ ಶುಬ್​ಮನ್​ ಗಿಲ್ ಮತ್ತು 7 ರನ್​ನೊಂದಿಗೆ ಚೇತೇಶ್ವರ ಪೂಜಾರ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply