3ನೇ ಟೆಸ್ಟ್​: ಭಾರತಕ್ಕೆ ಡಬಲ್ ಶಾಕ್​, ಆಸ್ಟ್ರೇಲಿಯಾ ಮೇಲುಗೈ!

masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೀತಿರೋ 3ನೇ ಟೆಸ್ಟ್​ನಲ್ಲಿ ಭಾರತಕ್ಕೆ ಡಬಲ್ ಶಾಕ್ ಉಂಟಾಗಿದೆ. ಒಂದನೇ ಶಾಕ್​, ಪಂದ್ಯದ ಮೇಲೆ ಆಸ್ಟ್ರೇಲಿಯಾ ಹಿಡಿತ ಸಾಧಿಸಿರೋದು. ಎರಡನೇ ಶಾಕ್, ಟೀಂ ಇಂಡಿಯಾದ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್​ ವೇಳೆ ಗಾಯಗೊಂಡಿರೋದು. ಅಂದ್ಹಾಗೆ ನಿನ್ನೆ 96 ರನ್​ಗೆ 2 ವಿಕೆಟ್​ ಕಳೆದುಕೊಂಡಿದ್ದ ಭಾರತ ಇವತ್ತು ಬ್ಯಾಟಿಂಗ್ ಮುಂದುವರಿಸಿ 244 ರನ್​ಗೆ ಆಲೌಟ್​ ಆಯ್ತು. ಭಾರತದ ಪರ ಶುಬ್​ಮನ್​ ಗಿಲ್ ಮತ್ತು ಚೇತೇಶ್ವರ ಪೂಜಾರ ತಲಾ 50 ರನ್ ಸಿಡಿಸಿದ್ರು. ಆಸ್ಟ್ರೇಲಿಯಾ ಪರ ಪ್ಯಾಟ್​ ಕಮಿನ್ಸ್ 4 ವಿಕೆಟ್​ ಪಡೆದು ಮಿಂಚಿದ್ರು. ನಂತರ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 3ನೇ ದಿನದಾಟದ ಅಂತ್ಯಕ್ಕೆ 103 ರನ್​ಗೆ 2 ವಿಕೆಟ್ ಕಳೆದುಕೊಂಡಿದೆ. ಲಬುಷೇನ್ 47* ಮತ್ತು ಸ್ಟೀವ್ ಸ್ಮಿತ್ 29* ರನ್​ ಸಿಡಿಸಿ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾಗೆ 197 ರನ್​ ಮುನ್ನಡೆ ಸಿಕ್ಕಂತಾಗಿದೆ. ಇದರೊಂದಿಗೆ ಒಂದ್​ರೀತಿ ಪಂದ್ಯದ ಮೇಲೆ ಆಸ್ಟ್ರೇಲಿಯಾ ಹಿಡಿತ ಸಾಧಿಸಿದಂತಾಗಿದೆ. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ. ಆದ್ರೆ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಗಾಯಗೊಂಡಿರೋದು ಕೂಡ ತಂಡದ ಟೆನ್ಷನ್ ಹೆಚ್ಚಿಸಿದೆ.

ಆಸ್ಟ್ರೇಲಿಯಾ: 338 & 103/2

ಭಾರತ: 244

-masthmagaa.com

Contact Us for Advertisement

Leave a Reply