3ನೇ ಟೆಸ್ಟ್ ಡ್ರಾ: ಗೆಲುವು ತಂದುಕೊಡಲಿಲ್ಲ ಪಂತ್​ ಹೊಡಿಬಡಿ ಆಟ

masthmagaa.com:

ಭಾರತ-ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ 3ನೇ ಟೆಸ್ಟ್ ಡ್ರಾ ಆಗಿದೆ. ಗೆಲ್ಲಲು 407 ರನ್ ಟಾರ್ಗೆಟ್​ ಬೆನ್ನಟ್ಟಿದ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಕಳೆದುಕೊಂಡು 334 ರನ್​ ಗಳಿಸಲಷ್ಟೇ ಶಕ್ತವಾಯ್ತು. ಟೀಂ ಇಂಡಿಯಾ ಪರ ರಿಷಬ್ ಪಂತ್ ಟೆಸ್ಟ್​ನಲ್ಲಿ ಒಂಡೇ ರೀತಿ ಹೊಡಿಬಡಿ ಆಟವಾಡಿದ್ರು. 118 ಬಾಲ್​ ಆಡಿದ ಪಂತ್​ 97 ರನ್ ಸಿಡಿಸಿ ಮಿಂಚಿದ್ರು. ಇದರಲ್ಲಿ 3 ಸಿಕ್ಸ್​, 12 ಫೋರ್ ಸೇರಿದೆ. ಪಂತ್ ಇನ್ನೊಂದು ಸ್ವಲ್ಪ ಹೊತ್ತು ಕ್ರೀಸ್​ನಲ್ಲಿ ನಿಂತಿದ್ರೆ ಟೀಂ ಇಂಡಿಯಾ ಈ ಪಂದ್ಯ ಗೆಲ್ಲೋ ಚಾನ್ಸಸ್ ಜಾಸ್ತಿ ಇತ್ತು. ಪಂತ್​ಗೆ ಉತ್ತಮ ಸಾಥ್ ನೀಡಿದ ಪೂಜಾರ 77 ರನ್ ಬಾರಿಸಿ ಔಟಾದ್ರು. ಪಂತ್​ ಮತ್ತು ಪೂಜಾರ ವಿಕೆಟ್​ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಟೀಂ ಇಂಡಿಯಾವನ್ನ ಸೇವ್ ಮಾಡಿದ್ದು ಹನುಮ ವಿಹಾರಿ ಮತ್ತು ಆರ್​. ಅಶ್ವಿನ್. ಇವರಿಬ್ಬರು ಸೇರಿ ಪಂದ್ಯವನ್ನ ಡ್ರಾ ಮಾಡಿದ್ರು. ಹನುಮ ವಿಹಾರಿ 161 ಎಸೆತಗಳಲ್ಲಿ 23 ರನ್ ಮತ್ತು ಅಶ್ವಿನ್ 128 ಎಸೆತಗಳಲ್ಲಿ 39 ರನ್ ಸಿಡಿಸಿ ಅಜೇಯರಾಗಿ ಉಳಿದ್ರು. 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 3 ಪಂದ್ಯಗಳು ಮುಗಿದಿದ್ದು ಎರಡೂ ತಂಡಗಳು ಒಂದೊಂದು ಮ್ಯಾಚ್ ಗೆದ್ದಿವೆ. 4ನೇ ಮತ್ತು ಕೊನೇ ಟೆಸ್ಟ್ ಜನವರಿ 15ರಿಂದ ಬ್ರಿಸ್ಬೇನ್​ನಲ್ಲಿ ಆರಂಭವಾಗಲಿದೆ.

ಆಸ್ಟ್ರೇಲಿಯಾ: 338 & 312/6

ಭಾರತ: 244 & 334/5

-masthmagaa.com

Contact Us for Advertisement

Leave a Reply