masthmagaa.com:

ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲು ಹಾಕಿದಂತೆ ಕಾಣ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ ನಿನ್ನೆ 277 ರನ್​ಗೆ 5 ವಿಕೆಟ್​​ ಕಳೆದುಕೊಂಡಿದ್ದ ಭಾರತ ಮೂರನೇ ದಿನವಾದ ಇವತ್ತು ಬ್ಯಾಟಿಂಗ್ ಮುಂದುವರಿಸಿ 326 ರನ್​ಗೆ ಆಲೌಟ್​ ಆಯ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 3ನೇ ದಿನದಾಟದ ಅಂತ್ಯಕ್ಕೆ 133 ರನ್​ಗೆ 6 ವಿಕೆಟ್​ ಕಳೆದುಕೊಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 195 ರನ್​ಗೆ ಆಲೌಟ್​ ಆಗಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 2 ರನ್ ಮುನ್ನಡೆ ಸಾಧಿಸಿದಂತಾಗಿದೆ. ಅಲ್ಲದೆ ಇನ್ನು ಉಳಿದಿರೋದು 4 ವಿಕೆಟ್ ಮಾತ್ರ. ಆಸ್ಟ್ರೇಲಿಯಾವನ್ನ ಬೇಗ ಆಲೌಟ್​ ಮಾಡಿದ್ರೆ ಟೀಂ ಇಂಡಿಯಾಗೆ ಗೆಲುವು ಮತ್ತಷ್ಟು ಸುಲಭವಾಗಲಿದೆ. ಆದ್ರೆ ಕ್ರೀಸ್​ನಲ್ಲಿರುವ ಕೆಮರೂನ್ ಗ್ರೀನ್ ಮತ್ತು ಪ್ಯಾಟ್ ಕಮಿನ್ಸ್ ಇಬ್ಬರೂ ಕೂಡ 50ಕ್ಕೂ ಹೆಚ್ಚು ಬಾಲ್​ಗಳನ್ನ ಆಡಿ ಸೆಟ್​ ಆಗಿದ್ದಾರೆ. ಈ ಪಾರ್ಟನರ್​​ಶಿಪ್ ಅನ್ನ ಮುರಿಯಬೇಕಿದೆ. ಭಾರತ ಪರ ಇವತ್ತು ರವೀಂದ್ರ ಜಡೇಜ 2 ಮತ್ತು ಉಳಿದ ಬೌಲರ್​ಗಳು ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ರು. ಒಂದ್ವೇಳೆ ಟೀಂ ಇಂಡಿಯಾ ಈ ಟೆಸ್ಟ್ ಗೆದ್ರೆ 4 ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲವಾಗಲಿದೆ.

ಆಸ್ಟ್ರೇಲಿಯಾ: 195 ಮತ್ತು 133/6

ಭಾರತ : 326

-masthmagaa.com

Contact Us for Advertisement

Leave a Reply