ಮೊದಲ ಪಂದ್ಯದಲ್ಲೇ ಅಬ್ಬರಿಸಿದ ರೋಹಿತ್..!

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಭಾರತ ರೋಹಿತ್ ಶರ್ಮಾ ಶತಕದ ನೆರವಿನಿಂದ ಉತ್ತಮ ಆಟವಾಡುತ್ತಿದೆ. ಇನ್ನೊಂದು ವಿಶೇಷ ಅಂದ್ರೆ ಟೆಸ್ಟ್‍ನಲ್ಲಿ ಆರಂಭಿಕ ಬ್ಯಾಟ್ಸ್‍ಮನ್ ಆಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ರೋಹಿತ್ ಅಬ್ಬರದಾಟ ಆಡಿದ್ದಾರೆ. ಶತಕ ಸಿಡಿಸಿ ಸೌತ್ ಆಫ್ರಿಕಾ ಬೌಲರ್‍ಗಳ ಬೆವರಿಳಿಸಿದ್ದಾರೆ. 154 ಎಸೆತಗಳಲ್ಲಿ 10 ಫೋರ್ ಮತ್ತು 4 ಸಿಕ್ಸರ್ ಬಾರಿಸಿ, ಶತಕದ ಗಡಿ ದಾಟಿದ್ದಾರೆ. 59 ಓವರ್ ಆದಾಗ ಭಾರತ ವಿಕೆಟ್ ನಷ್ಟವಿಲ್ಲದೇ 202 ರನ್ ಕಲೆಹಾಕಿತ್ತು. ರೋಹಿತ್ ಶರ್ಮಾ 115 ರನ್ ಸಿಡಿಸಿದ್ರೆ, ಮಯಾಂಕ್ ಅಗರ್‍ವಾಲ್ 84 ರನ್ ಕಳೆ ಹಾಕಿ ಆಡ್ತಿದ್ದಾರೆ.

Contact Us for Advertisement

Leave a Reply