VIDEO: ಗಡಿಯಲ್ಲಿ ಸೇನೆ ಹಿಂದಕ್ಕೆ ಕರೆಸಿಕೊಳ್ಳೋ ಪ್ರಕ್ರಿಯೆ ಹೇಗಿದೆ ನೋಡಿ

masthmagaa.com:

ಭಾರತ-ಚೀನಾ ನಡುವೆ ಕಳೆದೊಂದು ವರ್ಷದಿಂದ ಸಂಘರ್ಷ ನಡೀತಿದ್ದ ಪೂರ್ವ ಲಡಾಖ್​ನಲ್ಲಿ ಎರಡೂ ದೇಶದ ಸೇನೆಗಳು ನಿನ್ನೆಯಿಂದ ಡಿಸ್​ಎಂಗೇಜ್ಮೆಂಟ್​ ಪ್ರೋಸೆಸ್ ಶುರು ಮಾಡಿವೆ.. ಅಂದ್ರೆ ಸೇನೆಯನ್ನ ಹಿಂದಕ್ಕೆ ಕರೆಸಿಕೊಳ್ಳೋದು ಅಂತ ಹೇಳ್ಬೋದು. ಈ ಡಿಸ್​ಎಂಗೇಜ್ಮೆಂಟ್​ ಪ್ರೋಸೆಸ್​ ಹೇಗೆ ನಡೆಯುತ್ತೆ, ಅಲ್ಲಿನ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೋಡೋ ಕುತೂಹಲ ಸಾಕಷ್ಟು ಜನರಿಗೆ ಇರುತ್ತೆ. ಈ ಡಿಸ್​ಎಂಗೇಜ್ಮೆಂಟ್ ಪ್ರೋಸೆಸ್​​ನ ವಿಡಿಯೋವನ್ನ ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಒಂದೂಕಾಲು ನಿಮಿಷದ ಈ ವಿಡಿಯೋದಲ್ಲಿ, ಭಾರತ ಮತ್ತು ಚೀನಾ ಯೋಧರು, ಸೇನಾಧಿಕಾರಿಗಳು ಎದುರು-ಬದುರು ನಿಂತ್ಕೊಂಡು ಮೊದಲು ಸೆಲ್ಯೂಟ್​ ಹೊಡೀತಾರೆ. ಕೊರೋನಾ ಹಿನ್ನೆಲೆ ಎಲ್ಲರೂ ಮಾಸ್ಕ್ ಧರಿಸಿದ್ದಾರೆ. ನಂತ್ರ ಉಭಯ ದೇಶಗಳ ಸೇನಾಧಿಕಾರಿಗಳು ಒಂದು ಬುಕ್​ನಲ್ಲಿ ಸಹಿ ಹಾಕಿ ಪರಸ್ಪರ ಹಸ್ತಲಾಘವ ಮಾಡ್ತಾರೆ. ಇದಾದ ಬಳಿಕ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (PLA) ಮೊದಲ ಟ್ಯಾಂಕ್​ ಯು-ಟರ್ನ್​ ಹೊಡೆದು ವಾಪಸ್ ಹೊಗುತ್ತೆ. ನಂತ್ರ ಚೀನಾದ ಎರಡನೇ ಟ್ಯಾಂಕ್​ ಹಿಂದಕ್ಕೆ ಹೋಗುತ್ತೆ. ಅದಾದ ಬಳಿಕ ಭಾರತದ ಟ್ಯಾಂಕ್ ವಾಪಸ್ ಹೋಗುತ್ತೆ. ಕೊನೆಗೆ ಚೀನಾದ ಮೂರನೇ ಟ್ಯಾಂಕ್ ವಾಪಸ್​ ಹೋಗೋದನ್ನ ತೋರಿಸಲಾಗಿದೆ.

-masthmagaa.com

Contact Us for Advertisement

Leave a Reply