ಅಫ್ಘಾನಿಸ್ತಾನದ ರಾಯಭಾರಿ ಅಧಿಕಾರಿಗಳನ್ನು ವಾಪಸ್ ಕರೆಸಿದ ಭಾರತ!

masthmagaa.com:

ಅಫ್ಘಾನಿಸ್ತಾನದ ಕಂದಹಾರ್​ನಲ್ಲಿರೋ ರಾಯಭಾರಿ ಕಚೇರಿಯಿಂದ ತನ್ನೆಲ್ಲಾ ಸಿಬ್ಬಂದಿಯನ್ನು ಭಾರತ ವಾಪಸ್ ಕರೆಸಿಕೊಂಡಿದೆ. ನಿನ್ನೆ ವಾಯುಪಡೆಯ ವಿಮಾನದಲ್ಲಿ 50 ಮಂದಿಯನ್ನು ವಾಪಸ್ ಕರ್ಕೊಂಡು ಬರಲಾಗಿದೆ. ಈ ವೇಳೆ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸದೇ ಬೇರೆ ಮಾರ್ಗದಲ್ಲಿ ದೆಹಲಿಗೆ ಬರಲಾಗಿದೆ. ಈಗ ಆ ಕಚೇರಿಯಲ್ಲಿ ಆಫ್ಘನ್ ಮೂಲದ ಕೆಲ ಸಿಬ್ಬಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನು ಮಝರ್ ಎ ಶರೀಫ್​​ನಲ್ಲಿರೋ ಅಧಿಕಾರಿಗಳನ್ನು ಕೂಡ ಸದ್ಯದಲ್ಲೇ ವಾಪಸ್ ಕರೆಸಿಕೊಳ್ಳಲಾಗುತ್ತೆ. ಆದ್ರೆ ಕಾಬೂಲ್​ನಲ್ಲಿರೋ ಕಚೇರಿಯಲ್ಲಿ ಮಾತ್ರ ಅಗತ್ಯ ಸೇವೆಗಳನ್ನು ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗ್ತಿದೆ. ಇನ್ನು ಕಂದಹಾರ್​ನಲ್ಲಿ ಇತ್ತೀಚೆಗೆ ತಾಲಿಬಾನಿಗಳ ಜೊತೆ ಲಷ್ಕರ್ ಉಗ್ರರು ಕೂಡ ಸೇರಿಕೊಂಡಿದ್ದಾರೆ ಅಂತ ವರದಿಯಾಗಿತ್ತು. ಆಫ್ಘನ್ ಭದ್ರತಾ ಸಂಸ್ಥೆಗಳ ಪ್ರಕಾರ ಇಲ್ಲಿ 7 ಸಾವಿರಕ್ಕೂ ಹೆಚ್ಚು ಲಷ್ಕರ್ ಉಗ್ರರು ತಾಲಿಬಾನಿಗಳ ಪರವಾಗಿ ಕಾದಾಟಕ್ಕೆ ಇಳಿಯಲು ರೆಡಿಯಾಗಿದ್ದಾರೆ ಅಂತ ಗೊತ್ತಾಗಿದೆ. ಭಾರತ ತನ್ನ ರಾಯಭಾರಿ ಕಚೇರಿಯಿಂದ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿರೋದಕ್ಕೆ ಇದೂ ಒಂದು ಕಾರಣ ಅಂತ ಹೇಳಲಾಗ್ತಿದೆ. ಅಫ್ಘಾನಿಸ್ತಾನದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳೋದಾಗಿ ಅಮೆರಿಕ ಘೋಷಿಸಿದ ಬಳಿಕ ತಾಲಿಬಾನಿಗಳ ಅಟ್ಟಹಾಸ ಜಾಸ್ತಿಯಾಗ್ತಿದೆ. ಈಗಾಗಲೇ 85 ಪರ್ಸೆಂಟ್​ನಷ್ಟು ಅಫ್ಘಾನಿಸ್ಥಾನವನ್ನು ವಶಕ್ಕೆ ಪಡ್ಕೊಂಡಾಗಿದೆ ಅಂತ ತಾಲಿಬಾನಿಗಳು ಹೇಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply