ಹೇಗಾದ್ರೂ ಮಾಡಿ ನಾನು ಭಾರತಕ್ಕೆ ಬರಬೇಕು, ಪಾಕಿಸ್ತಾನಕ್ಕೆ ತೆರಳಿದ್ದ ಅಂಜು ಹೀಗಂದಿದ್ಯಾಕೆ?

masthmagaa.com:

ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಪ್ರಿಯಕರನಿಗಾಗಿ ಭಾರತದಿಂದ ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ಈಗ ಹೇಗಾದ್ರೂ ಮಾಡಿ ಭಾರತಕ್ಕೆ ವಾಪಾಸಾಗಬೇಕು ಅನ್ನೋ ಇಚ್ಛೆ ವ್ಯಕ್ತಪಡಿಸಿದ್ದಾಳೆ. ನಾನೇನು ಅಂದುಕೊಂಡು ಇಲ್ಲಿಗೆ ಬಂದಿದ್ದೆನೋ ಅದು ಆಗಲಿಲ್ಲ. ನನಗೆ ಬಹಳ ದುಃಖವಾಗಿದೆ. ನಾನು ಹಗಲೂ ರಾತ್ರಿ ನನ್ನ ಮಕ್ಕಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನನ್ನಿಂದಾಗಿ ಭಾರತದಲ್ಲಿ ನನ್ನ ಕುಟುಂಬ ಅವಮಾನಕ್ಕೆ ಒಳಗಾಗಬೇಕಾಯಿತು ಅಂತ ಹೇಳಿದ್ದಾರೆ. ಬಿಬಿಸಿ ವರದಿಯ ಪ್ರಕಾರ, ಆಕೆ ಈಗ ಪಾಕಿಸ್ತಾನದಲ್ಲಿ ಸಂತೋಷವಾಗಿಯೇನೋ ಇದ್ದಾಳೆ. ಎಲ್ಲರೂ ಆಕೆಯನ್ನು ಬಹಳ ಕಾಳಜಿವಹಿಸಿ ನೋಡಿಕೊಳ್ಳತ್ತಿದ್ದಾರೆ. ಆದರೆ, ಭಾರತದಲ್ಲಿ ಇರುವ ನನ್ನ ಮಕ್ಕಳನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ನನಗೆ ನನ್ನ ಮಕ್ಕಳನ್ನ ನೋಡದೇ ಹುಚ್ಚು ಹಿಡಿದಂತಾಗಲಿದೆ. ಇದಕ್ಕಾಗಿ ನಾನು ಬಹಳ ಬೇಸರವಾಗಿದ್ದು, ಮಕ್ಕಳನ್ನು ಭೇಟಿಯಾಗಲು ಭಾರತಕ್ಕೆ ಬರುವ ಇಚ್ಛೆಯಿದೆ ಎಂದಿದ್ದಾಳೆ. ಭಾರತಕ್ಕೆ ಮರಳಿದ ನಂತರ ನಾನು ಏನು ಎದುರಿಸಬೇಕೋ ಎಲ್ಲವನ್ನೂ ಎದುರಿಸುತ್ತೇನೆ. ಈ ಹಿಂದೆ ನಾನು ಮಕ್ಕಳನ್ನು ಒಂದು ವರ್ಷಗಳ ಕಾಲ ಬಿಟ್ಟು ದೂರವಿದ್ದೆ. ಆದರೆ, ಈಗ ನನ್ನ ಮಕ್ಕಳ ಜೊತೆಯಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಹೇಗಾದರೂ ಮಾಡಿ ಅವರನ್ನು ಭೇಟಿ ಮಾಡಬೇಕು. ನನ್ನ ಪುಟ್ಟ ಮಗನೊಂದಿಗೆ ನಾನು ಮಾತನಾಡುವುದು ಹೇಗೆ ಅಂತ ಅಂಜು ತನ್ನ ಅಳಲನ್ನ ತೋಡಿಕೊಂಡಿದ್ದಾರೆ. ಅಂದ್ಹಾಗೆ ಅಂಜು ಅವರ ವೀಸಾ ಆಗಸ್ಟ್‌ 21 ರಂದು ಕೊನೆಯಾಗಲಿದ್ದು, ಪಾಕಿಸ್ತಾನ ಸರ್ಕಾರ ಅದನ್ನ ವಿಸ್ತರಿಸಿದೆ ಅನ್ನೋ ಸುದ್ದಿ ವರದಿಯಾಗಿತ್ತು. ಆದರೆ ವೀಸಾ ಇನ್ನೂ ವಿಸ್ತರಣೆಯಾಗಿಲ್ಲ ಅಂತ ಬಿಬಿಸಿ ವರದಿ ಮಾಡಿದೆ.

-masthmagaa.com

Contact Us for Advertisement

Leave a Reply