ಕೊರೊನಾ ಸೋಂಕು ಏರಿಕೆ: ಕೇಂದ್ರ ಆರೋಗ್ಯ ಸಚಿವರ ನೇತೃತ್ವದಲ್ಲಿ ಉನ್ನತ ಸಭೆ

masthmagaa.com:

ದೇಶದಲ್ಲಿ ಕೊರೊನಾ ಕೇಸ್‌ಗಳು ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ಮತ್ತೆ ಜನರಲ್ಲಿ ಭೀತಿ ಮೂಡಿಸಿದೆ. ಕಳೆದ 24 ಗಂಟೆಯಲ್ಲಿ 6,050 ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ. ಕಳೆದ ವರ್ಷ ಸೆಪ್ಟಂಬರ್‌ನಿಂದ ಇಲ್ಲಿಯವರೆಗೆ ಇದೇ ಮೊದಲ ಬಾರಿಗೆ ದೈನಂದಿನ ಕೊರೊನಾ ಕೇಸ್‌ 6 ಸಾವಿರ ಗಡಿ ದಾಟಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಸಭೆಯನ್ನ ವರ್ಚ್ಯುವಲ್ ಆಗಿ ನಡೆಸಿದ್ದಾರೆ. ಈ ವೇಳೆ ನೆಗಡಿ, ಮೈ-ಕೈ ನೋವು ಮಾದರಿಯ ಹೆಲ್ತ್‌ ಇಶ್ಯು ಬಗ್ಗೆ ಹಾಗೂ ಗಂಭೀರ ಉಸಿರಾಟದ ಸಮಸ್ಯೆ ಪ್ರಕರಣಗಳ ಮೇಲೆ ನಿಗಾ ಇರಿಸಿ ಎಮರ್ಜನ್ಸಿ ಹಾಟ್‌ಸ್ಪಾಟ್‌ಗಳನ್ನ ಗುರುತಿಸಬೇಕು. ಸೋಂಕು ಪರೀಕ್ಷೆ, ಲಸಿಕೆ ವಿತರಣೆಯನ್ನ ಹೆಚ್ಚಿಸಬೇಕು. ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಲಭ್ಯ ಇರುವಂತೆ ಗಮನ ಹರಿಸಬೇಕು ಅಂತ ಸೂಚನೆಗಳನ್ನ ನೀಡಿದ್ದಾರೆ. ಇನ್ನೊಂದ್‌ ಕಡೆ ಕೊರೊನಾ ಕೇಸ್‌ನಲ್ಲಿ ಏರಿಕಾಗ್ತಿರೊ ಹಿನ್ನೆಲೆಯಲ್ಲಿ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌ ಅವ್ರು ಕೋವಿಡ್‌ ವ್ಯಾಕ್ಸಿನ್‌ನ್ನ ಒದಗಿಸುವಂತೆ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದಾರೆ. ಮತ್ತೊಂದ್‌ ಕಡೆ ಪುದುಚೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಬಳಕೆಯನ್ನ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

-masthmagaa.com

Contact Us for Advertisement

Leave a Reply