ದಿವಾಳಿಯಾಗುತ್ತಿದ್ದ ಗೋ ಫಸ್ಟ್‌ ಏರ್‌ಲೈನ್‌ನನ್ನ ಕಾಪಾಡಿದ NCLT!

masthmagaa.com:

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಗೋ ಫಸ್ಟ್‌ ಏರ್‌ಲೈನ್ಸ್‌ ದಿವಾಳಿಯಾಗದಂತೆ ಪರಿಹಾರ ನೀಡಲು National Company Law Tribunal (NCLT) ಒಪ್ಪಿಗೆ ನೀಡಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಏರ್‌ಲೈನ್ಸ್‌ನ ನಿರ್ವಹಣೆಯನ್ನು ವಹಿಸಿಕೊಳ್ಳುವುದಾಗಿ NCLT ದ್ವಿಸದಸ್ಯ ಪೀಠ ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೋ ಫಸ್ಟ್‌ನ ಸಿಇಒ ಕೌಶಿಕ್‌ ಖೋನಾ ಅವ್ರು ಇದೊಂದು ಐತಿಹಾಸಿಕ ನಿರ್ಧಾರ ಅಂತ ಹೇಳಿದ್ದಾರೆ. ಇನ್ನು ಭಾರತೀಯ ವಿಮಾನ ಸಂಸ್ಥೆಯೊಂದು ಸ್ವಯಂಪ್ರೇರಣೆಯಿಂದ ಒಪ್ಪಂದಗಳು ಮತ್ತು ಸಾಲವನ್ನ ಮರುಪಾವತಿ ಮಾಡಲು ದಿವಾಳಿತನದ ರಕ್ಷಣೆ ಕೋರಿರೋದು ಇದೇ ಮೊದಲು ಎನ್ನಲಾಗಿದೆ. ಅಂದ್ರೆ ನಾವು ಸಂಕಷ್ಟದಲ್ಲಿದ್ದೀವಿ ನಮ್ಮನ್ನ ಕಾಪಾಡಿ ಅಂತ ನ್ಯಾಷನಲ್‌ ಕಂಪನಿ ಲಾ ಟ್ರಿಬ್ಯುನಲ್‌ಗೆ ಮನವಿ ಮಾಡಿರೋದು ಇದೇ ಮೊದಲು ಅಂತ.

-masthmagaa.com

Contact Us for Advertisement

Leave a Reply