ಒಂದೇ ಡೋಸ್ ಲಸಿಕೆ ಕೊಡೋ ಬಗ್ಗೆ ಕೇಂದ್ರ ಹೇಳಿದ್ದೇನು..?

masthmagaa.com:

ಇನ್ನು ಕೋವಿಶೀಲ್ಡ್ ಲಸಿಕೆಯನ್ನ ಇನ್ಮುಂದೆ ಒಂದು ಡೋಸ್​ ಮಾಡಲಾಗುತ್ತೆ ಅಂತೆಲ್ಲಾ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಇವತ್ತು ಸ್ಪಷ್ಟನೆ ಕೊಟ್ಟಿರೋ ಕೇಂದ್ರ ಸರ್ಕಾರ ಸದ್ಯ ಭಾರತದಲ್ಲಿ ಹಾಕ್ತಿರೋ ಕೋವಿಶೀಲ್ಡ್​ ಲಸಿಕೆ ಎರಡು ಡೋಸ್​ನದ್ದೇ ಆಗಿರುತ್ತೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಹೇಳಿದೆ. ಕೋವಿಶೀಲ್ಡ್​ನ ಮೊದಲ ಡೋಸ್ ಹಾಕಿದ 12 ವಾರಗಳ ನಂತರ ಎರಡನೇ ಡೋಸ್ ಹಾಕಲಾಗುತ್ತೆ. ಅದೇ ರೀತಿ ಕೋವಾಕ್ಸಿನ್ ಕೂಡ ಎರಡು ಡೋಸ್ ಆಗಿರುತ್ತೆ. ಅದನ್ನ ಹಾಕಿದ 4ರಿಂದ 6 ವಾರಗಳಲ್ಲಿ ಎರಡನೇ ಡೋಸ್ ಹಾಕಲಾಗುತ್ತೆ ಅಂತ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply