ಆಗಸ್ಟ್‌ 30: ಸೆನ್ಸೆಕ್ಸ ಗೂಳಿ ಅಬ್ಬರ, 1564 ಅಂಕ ಏರಿಕೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇಂದು ಈ ವರ್ಷದ 2ನೇ ಏಕ ದಿನದ ಗರಿಷ್ಟ ಲಾಭವನ್ನ ದಾಖಲಿಸಿದೆ. 1564 ಅಂಕ ಏರಿಕೆ ಕಂಡು 59,537 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂದ್ಹಾಗೆ ಇಂದು ಎಲ್ಲ ವಲಯಗಳಲ್ಲೂ ಖರೀದಿಗಾರರು ಆಸಕ್ತಿ ತೋರಿಸಿದ ಕಾರಣ ದೇಶೀಯ ಷೇರುಪೇಟೆಯ ಸೂಚ್ಯಂಕಗಳು ಏರಿಕೆ ಕಂಡಿವೆ ಅಂತ ಹೇಳಲಾಗಿದೆ. ಅದ್ರಲ್ಲೂ ಪ್ರಮುಖ ಲಾಭಗಳನ್ನ ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳು ಪಡೆದುಕೊಂಡಿವೆ ಎನ್ನಲಾಗಿದೆ. ನಿಫ್ಟಿ 446 ಅಂಕ ಏರಿಕೆ ಕಂಡು 17,759 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 47 ಪೈಸೆ ಏರಿಕೆಗೊಂಡು 79.44 ಆಗಿದೆ. (79 ರೂಪಾಯಿ 44 ಪೈಸೆ ).

-masthmagaa.com

Contact Us for Advertisement

Leave a Reply