ಇಂಡೇನೇಷ್ಯಾದಿಂದ ಭಾರತಕ್ಕೆ ಎಣ್ಣೆ ಪೆಟ್ಟು!

masthmagaa.com:

ವಿಶ್ವದ ಅತಿದೊಡ್ಡ ಪಾಮ್‌ ಆಯಿಲ್‌ ಉತ್ಪಾದಕ ದೇಶ ಇಂಡೋನೇಷ್ಯಾದಿಂದ ಪಾಮ್‌ ಆಯಿಲ್‌ ರಫ್ತು ಆಗೋದಿಲ್ಲ ಅಂತ ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. ಅಧ್ಯಕ್ಷ ಜೊಕೊ ವಿಡೊಡೊ ಮಾತನಾಡಿ, ” ಪಾಮ್‌ ಆಯಿಲ್‌ ಕೊರತೆ ಉಂಟಾಗ್ತಿರೋದ್ರಿಂದ ದೇಶದಲ್ಲೂ ಅದರ ಬೆಲೆ ಜಾಸ್ತಿಯಾಗ್ತಿದೆ. ಹಾಗಾಗಿ ಮುಂದಿನ ಆದೇಶದವರೆಗೂ ಆಯಿಲ್ ರಫ್ತನ್ನ ತಡೆ ಹಿಡಿಯುತ್ತಿದ್ದೀವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಇಂಡೋನೇಷ್ಯಾ ವಿಶ್ವದಲ್ಲೇ ಅತಿಹೆಚ್ಚು ಪಾಮ್‌ ಆಯಿಲ್‌ ಉತ್ಪಾದನೆ ಮಾಡೋ ದೇಶವಾಗಿದ್ದು, ಜಗತ್ತಿನ ಶೇಕಡ ಅರ್ಧಕ್ಕಿಂತ ಹೆಚ್ಚು ಪಾಮ್ ಆಯಿಲ್‌ ಅನ್ನ ಅದೊಂದೇ ಉತ್ಪಾದಿಸುತ್ತದೆ. ಇನ್ನು ರಫ್ತಿನ ಹೆಚ್ಚಿನ ಭಾಗವನ್ನ ಭಾರತ ಮತ್ತು ಚೀನಾ ಎರಡು ದೇಶಗಳೇ ಆಮದು ಮಾಡಿಕೊಳ್ಳುತ್ತಿವೆ. ಈ ನಿರ್ಧಾರದಿಂದ ಭಾರತದಲ್ಲಿ ಈಗಾಗಲೇ ಆಕಾಶ ಮುಟ್ಟಿರೋ ಅಡುಗೆ ಎಣ್ಣೆಬೆಲೆಗಳು ಮತ್ತಷ್ಟು ದುಬಾರಿಯಾಗೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply