ಭಾರತದ ಈರುಳ್ಳಿಗೆ ಇಂಡೋನೇಷ್ಯಾದಲ್ಲಿ ಭಾರೀ ಡಿಮ್ಯಾಂಡ್!

masthmagaa.com:

ಆಸಿಯಾನ್‌ ರಾಷ್ಟ್ರಗಳಲ್ಲೇ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ಅಂತ ಗುರುತಿಸಿಕೊಳ್ಳೋ ಇಂಡೋನೇಷ್ಯಾ 9 ಲಕ್ಷ ಟನ್‌ ಈರುಳ್ಳಿ ಆಮದಿಗೆ ಬೇಡಿಕೆ ಇಟ್ಟಿದೆ. ಆದ್ರೆ ಸದ್ಯ ಬೆಳೆ ಕೊರತೆಯಿಂದಾಗಿ ಭಾರತ ವಿದೇಶಗಳಿಗೆ ಈರು‍ಳ್ಳಿ ರಫ್ತನ್ನ ನಿಲ್ಲಿಸಿದೆ. ಅಗಸ್ಟ್‌ನಲ್ಲಿ ಭಾರತ ಈರುಳ್ಳಿ ಮೇಲಿನ ರಫ್ತಿಗೆ 40% ಟ್ಯಾಕ್ಸ್‌ ಹೇರಿದ್ದರ ಪರಿಣಾಮ ಅಕ್ಟೋಬರ್‌ನಲ್ಲಿ ಒಂದು ಟನ್‌ ಈರುಳ್ಳಿ ಬೆಲೆ 800 ಡಾಲರ್‌ ಅಂದ್ರೆ 66.5 ಸಾವಿರ ರೂ ಆಗಿತ್ತು. ಸದ್ಯ ಭಾರತದಲ್ಲೇ ಈರುಳ್ಳಿ ಬೇಡಿಕೆ ಜಾಸ್ತಿಯಾಗಿರೋದ್ರಿಂದ ರಫ್ತು ಅಸಾಧ್ಯ ಎನ್ನಲಾಗಿದೆ. ಅಂದ್ಹಾಗೆ ಜಗತ್ತಿನಲ್ಲೇ ನೆದರ್‌ಲ್ಯಾಂಡ್, ಮೆಕ್ಸಿಕೊ ದೇಶಗಳ ಬಳಿಕ ಭಾರತವೇ ಅತಿ ಹೆಚ್ಚು ಈರುಳ್ಳಿ ರಫ್ತು ಮಾಡೋ ದೇಶವಾಗಿದೆ. ಜಾಗತಿಕವಾಗಿ ಈರುಳ್ಳಿ ಉತ್ಪಾದನೆಯ ನಾಲ್ಕನೇ ಒಂದು ಭೂ ಭಾಗವನ್ನ ಭಾರತ ಹೊಂದಿದೆ.

-masthmagaa.com

Contact Us for Advertisement

Leave a Reply