ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 11ಸಾವಿರ ಜನ ಬೇರೆಡೆ ಶಿಫ್ಟ್!

masthmagaa.com:

ರುವಾಂಗ್‌ ಪರ್ವತದಲ್ಲಿ ಜ್ವಾಲಾಮುಖಿ ಸ್ಪೋಟ ಸಂಭವಿಸಿದ ಪರಿಣಾಮ ಇಂಡೋನೇಷ್ಯಾದಲ್ಲಿ ಸುನಾಮಿ ಅಲರ್ಟ್‌ ಘೋಷಿಸಲಾಗಿದೆ. ಹೀಗಾಗಿ ಅಲ್ಲಿನ ಉತ್ತರ ಭಾಗದಲ್ಲಿ 11ಸಾವಿರಕ್ಕೂ ಅಧಿಕ ಜನರಿಗೆ ಬೇರೆಡೆ ಶಿಫ್ಟ್‌ ಆಗುವಂತೆ ಇಂಡೋನೇಷ್ಯಾ ಸರ್ಕಾರ ಆದೇಶ ನೀಡಿದೆ ಅಂತ ಮಾಹಿತಿ ಲಭ್ಯ ಆಗಿದೆ. ಕಳೆದ 24 ಗಂಟೆಗಳಲ್ಲಿ ಸುಲವಾಸಿ ದ್ವೀಪ ಪ್ರದೇಶದಲ್ಲಿ ಐದು ಬಾರಿ ಪ್ರಬಲ ಜ್ವಾಲಾಮುಖಿ ಸ್ಫೋಟಗಳು ಸಂಭವಿಸಿದ್ದು, ಈಗ ಸುನಾಮಿ ಅಪ್ಪಳಿಸೊ ಸಾಧ್ಯತೆ ಇದೆ ಅಂತ ಅಂದಾಜಿಸಲಾಗಿದೆ. ಆದ್ರೆ ಈ ಜ್ವಾಲಾಮುಖಿ ಸ್ಪೋಟಗೊಂಡ ಘಟನೆಯಲ್ಲಿ ಸಾವು-ನೋವಾದ ಬಗ್ಗೆ ಇನ್ನುವರೆಗೆ ಯಾವುದೇ ಮಾಹಿತಿ ಲಭ್ಯ ಆಗಿಲ್ಲ. ಅಂದ್ಹಾಗೆ ಫೆಸಿಫಿಕ್‌ ಮಹಾಸಾಗರದ ರಿಂಗ್‌ ಆಫ್‌ ಫೈರ್‌ ವ್ಯಾಪ್ತಿಯಲ್ಲಿರೊ ಇಂಡೋನೇಷ್ಯಾದಲ್ಲಿ ಆಗಾಗ ಜ್ವಾಲಾಮುಖಿ ಚಟುವಟಿಕೆಗಳು ಸಂಭವಿಸುತ್ತಿರುತ್ತವೆ. ಅಲ್ದೇ 2018ರಲ್ಲಿ ಜ್ವಾಲಾಮುಖಿ ಸ್ಪೋಟ ಸಂಭವಿಸಿದಾಗ ಕನಿಷ್ಟ 430 ಜನಸಾವನ್ನಪ್ಪಿದ್ರು. ಈಗ ಮತ್ತೆ ಜ್ವಾಲಾಮುಖಿ ತೀವ್ರ ಸ್ವರೂಪ ಪಡೆದು ಸುನಾಮಿ ಏಳೋ ಸಾಧ್ಯತೆ ಇದೆ ಅಂತ ಭೂ ವಿಜ್ಞಾನ ಕೇಂದ್ರದ ಅಧಿಕಾರಿಗಳು ಅಲರ್ಟ್‌ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply