ಎಲ್ಲರು ಫೋನ್​​ನಲ್ಲಿ ಕೂಡಲೇ ಈ ಸೆಟ್ಟಿಂಗ್ ಆಫ್ ಮಾಡಿ…ಶಾಕಿಂಗ್ ರಿಪೋರ್ಟ್​​

ಹಾಯ್ ಫ್ರೆಂಡ್ಸ್…
ನೀವು ಮೊಬೈಲ್​​​​ನಲ್ಲಿ ಏನು ಮಾಡುತ್ತಿದ್ದೀರಿ ಅನ್ನೋದು ನಿಮ್ಮನ್ನು ಬಿಟ್ಟು ತುಂಬಾ ಜನಕ್ಕೆ ಗೊತ್ತಾಗುತ್ತಿದೆ. ಒಂದಷ್ಟು ನಿಗೂಢ ವ್ಯಕ್ತಿಗಳು ನಿಮ್ಮ ಪ್ರತಿ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ. ನಾವು ನಮ್ಮ ಡೈಲಿ ಲೈಫ್​​​​ನಲ್ಲಿ ಬಳಸುವ ಕೆಲ ಕಂಪ್ಯೂಟರ್ ಪ್ರೋಗ್ರಾಮ್, ಮೊಬೈಲ್ ಅಪ್ಲಿಕೇಶನ್ಸ್ ಹಾಗೂ ನಿಮ್ಮ ಮೊಬೈಲ್​​​​ನಲ್ಲಿರುವ ಕ್ಯಾಮೆರಾಗಳ ಮೂಲಕ ನಿಮ್ಮ ಮೇಲೆ ಈ ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆ‌. ನಿಮಗೆ ಶಾಕಾಗಬಹುದು, ಹೀಗೂ ನಡೆಯುತ್ತಾ ಅಂತ ಆಶ್ಚರ್ಯ ಆಗಬಹುದು, ಯಾಕಂದ್ರೆ ನೀವು ಆನ್ಲೈನ್ ನಲ್ಲಿ ಮಾಡುವ ಪ್ರತಿಯೊಂದು ಚಟುವಟಿಕೆಗಳನ್ನ ಟ್ರ್ಯಾಕ್ ಮಾಡಲಾಗುತ್ತದೆ. ರೆಕಾರ್ಡ್ ಮಾಡಲಾಗುತ್ತದೆ. ನಿಮ್ಮ ಖಾಸಗಿ ಮಾಹಿತಿಯನ್ನು better targeted ads ಮಾಡುವ ಕಂಪನಿಗಳಿಗೆ ಒಳ್ಳೆಯ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ಕಾಲದಲ್ಲಿ ಪ್ರೈವಸಿ ಅನ್ನೋದು ದೊಡ್ಡ ಮಿಥ್ ಆಗಿದೆ. ಪ್ರೈವಸಿ ಅನ್ನೋದು ದೊಡ್ಡ ಜೋಕ್ ಆಗಿದೆ. ಸೋ ಈ ವಿಶೇಷ ವಿಡಿಯೋದಲ್ಲಿ ಯಾವ ಯಾವ ರೀತಿ ಕಂಪನಿಗಳು ನಮ್ಮ ಅನುಮತಿಯಿಲ್ಲದೆ ನಮ್ಮ ಡೇಟಾವನ್ನು ಕದಿಯುತ್ತಿವೆ ಅನ್ನೋದನ್ನ ನೋಡಿಕೊಂಡು ಬರೋಣ. ಜೊತೆಗೆ ಕೊನೆಯಲ್ಲಿ ಇವುಗಳಿಂದ ಬಚಾವಾಗಲು ನೀವು ಏನು ಮಾಡಬೇಕು? ನಿಮ್ಮ ಫೋನ್ ನಲ್ಲಿ ಯಾವ ಸೆಟ್ಟಿಂಗ್ಸ್ ಚೇಂಜ್ ಮಾಡಬೇಕು ಅನ್ನೋದನ್ನ ಕೂಡ ತಿಳಿಸಿಕೊಡುತ್ತೇವೆ. ಕೊನೆವರೆಗೂ ಓದಿ…

ನಿಮ್ಮ Medical Records ಮಾರುತ್ತಿವೆ Hospitals ಮತ್ತು Pharmacies..!
ಇದು ನಿಜಕ್ಕೂ ಆತಂಕಕಾರಿ. ನೀವು ತುಂಬಾ ನಂಬಿ.. ಚಿಕಿತ್ಸೆ ಪಡೆಯೋಕೆ ಅಂತ ಹೋಗುವ ಆಸ್ಪತ್ರೆಯಲ್ಲೂ ನಿಮ್ಮ ಖಾಸಗಿ ಮಾಹಿತಿ ಸೇಫ್ ಅಲ್ಲ. ನಾವು ಯಾವುದೇ ಆಸ್ಪತ್ರೆಗೆ ಹೋದರೆ ಅಲ್ಲಿ ನಮ್ಮ ಎಲ್ಲಾ ಖಾಸಗಿ ಮಾಹಿತಿಯನ್ನು, ಅಂದರೆ ನಮ್ಮ ಹೆಸರು, ವಿಳಾಸ, ಫೋನ್ ನಂಬರ್, ಐಡಿ ಪ್ರೂಫ್, ಯಾವ ಚಿಕಿತ್ಸೆಗಾಗಿ ಬಂದಿದ್ದೇವೆ..? ಯಾವೆಲ್ಲಾ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೇವೆ..? ಎಲ್ಲವನ್ನು ನೀಟಾಗಿ ಹೇಳಿಬಿಡುತ್ತೇವೆ. ಎಲ್ಲಾ ಖಾಸಗಿ ಮಾಹಿತಿ ಕೇವಲ ಆಸ್ಪತ್ರೆ ಮತ್ತು ಡಾಕ್ಟರ್ ಹತ್ತಿರ ಸೇಫ್ ಆಗಿ ಇರುತ್ತೆ ಅಂತ ನಂಬಿಕೊಂಡು ಹೇಳಿಬಿಡುತ್ತೇವೆ. ಆದರೆ ವಿಚಾರ ಖಂಡಿತ ಅಷ್ಟು ಸಿಂಪಲ್ ಇಲ್ಲ. ಕೆಲ ಆಸ್ಪತ್ರೆಗಳು ಈ ಡೇಟಾವನ್ನು ಆಕರ್ಷಕ ಬೆಲೆಗೆ ದೊಡ್ಡ ದೊಡ್ಡ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಿಗೆ ಮಾರಿಬಿಡುತ್ತಾರೆ. ಈ ಡೇಟಾವನ್ನು ಬಳಸಿಕೊಳ್ಳುವ ದೊಡ್ಡದೊಡ್ಡ ಜಾಹೀರಾತು ಕಂಪನಿಗಳು ನಿಮಗೆ ಟಾರ್ಚರ್ ಶುರುಮಾಡುತ್ತಾರೆ. ದಿನಬೆಳಗಾದರೆ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು, ಬ್ಯಾಂಕ್ ಮತ್ತು ಸಾಲಕೊಡುವ ಫೈನಾನ್ಶಿಯಲ್ ಕಂಪನಿಗಳು ನಿಮಗೆ ಫೋನ್ ಮಾಡಿ ಸತಾಯಿಸಲು ಶುರುಮಾಡುತ್ತಾರೆ. ಲೋನ್ ಬೇಡ ಮಾರಾಯ್ತಿ ಅಂದ್ರು ಕೇಳುವುದಿಲ್ಲ. ಸರ್ ನಿಮಗೆ ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಆಫರ್ ಇದೆ ಅಂತಾ ಹಿಂಸೆ ಕೊಡುತ್ತಾರೆ. ಇತ್ತೀಚಿಗೆ ದೊಡ್ಡ ಸೋಶಿಯಲ್ ಮೀಡಿಯಾ ಕಂಪನಿಯೊಂದರ ಪ್ರತಿನಿಧಿಗಳು ದೇಶದ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳು ಖಾಸಗಿ ಮಾಹಿತಿ ಮಾರುವಂತೆ ಆಸ್ಪತ್ರೆಗಳಿಗೆ ಡೀಲ್ ಕೊಟ್ಟಿದ್ದರು. ನಾವು ಆ ಸೋಶಿಯಲ್ ಮೀಡಿಯಾ ಕಂಪನಿಯ ಹೆಸರನ್ನು ಈಗ ಹೇಳೋಕೆ ಆಗೋದಿಲ್ಲ. ಬರೀ ಆಸ್ಪತ್ರೆ, ಮೆಡಿಕಲ್ಸ್ ಮಾತ್ರವಲ್ಲ ಇತ್ತೀಚೆಗೆ ಪಿಜ್ಜಾ ಬರ್ಗರ್ ಅಂಗಡಿಯಿಂದ ಹಿಡಿದು ತರಕಾರಿ ಮಾರುವ ಸೂಪರ್​ ಮಾರ್ಕೆಟ್ ತನಕ ಪ್ರತಿಯೊಬ್ಬರು ನಿಮ್ಮ ಮೊಬೈಲ್ ನಂಬರ್ ಹೇಳಿ ಸರ್ ಪ್ಲೀಸ್ ಅಂತಾ ಹಲ್ಲು ಬಿಡುತ್ತಾರೆ. ಅದಕ್ಕೆ ಪ್ರತಿಯಾಗಿ ನೀವು ಕೂಡ ಕಿಸಿಯುತ್ತ ನಂಬರ್ ಕೊಟ್ಟಿರೋ ಕೆಟ್ಟಿರಿ. ಮರುದಿನದಿಂದ ಆ ಆಫರ್ ಈ ಆಫರ್ ಅಂತಾ ಸುಡುಗಾಡು ಮೆಸೇಜ್ ಶುರುವಾಗುತ್ತೆ.

Mobile Phone ಮತ್ತು Google ನಿಮ್ಮ ಜನ್ಮಜಾಲಾಡುತ್ತವೆ!
ಹೌದು ಫ್ರೆಂಡ್ಸ್… ನಾವು ಫುಲ್ ಪಾಸ್ವರ್ಡ್ ಹಾಕಿ, ಫಿಂಗರ್ ಪ್ರಿಂಟ್ ಲಾಕ್ ಹಾಕಿ, ಫೇಸ್ ಲಾಕ್ ಹಾಕಿ ಮೊಬೈಲ್ ಫೋನ್ ಗಳಲ್ಲಿ ನಾನಾತರದ ಸೀಕ್ರೆಟ್ಸ್ ಇಡುತ್ತೇವೆ. ಆದರೆ ಖಂಡಿತ ಯಾವುದು ಸೀಕ್ರೆಟ್ಸ್ ಅಲ್ಲ. ಯಾಕಂದ್ರೆ ನೀವು ಅಂದುಕೊಂಡಿರುವ ತರ ಅದು ನಿಮಗೆ ಮಾತ್ರ ಆಕ್ಸೆಸ್ ಇರುವ ಡೇಟಾ ಅಲ್ಲ. ಇದೊಂಥರಾ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ಗೊತ್ತಾಗಲ್ಲ ಅನ್ನೋ ಗಾದೆ ಇದೆಯಲ್ಲ.? ಇಲ್ಲೂ ಅದೇ ಕಥೆ. ಮೊಬೈಲ್ ಕಂಪನಿಗಳು ಮತ್ತು ಗೂಗಲ್ ನಿಮ್ಮ ಪರ್ಸನಲ್ ಡೇಟಾವನ್ನು ಕದ್ದು ನೇರವಾಗಿ ಅದರ ದುರುಪಯೋಗ ಮಾಡಿಕೊಳ್ಳದೇ ಇರಬಹುದು. ನಿಮಗೆ ಬ್ಲಾಕ್ ಮೇಲ್ ಮಾಡದೇ ಇರಬಹುದು. ಆದರೆ ನಿಮ್ಮ ಹೆಸರಲ್ಲಿ ಅಡ್ವಟೈಸಿಂಗ್ ಐಡಿ ಕ್ರಿಯೇಟ್ ಮಾಡಿ, ನಿಮ್ಮ ಎಲ್ಲ ಮಾಹಿತಿಯನ್ನು ಆ ಐಡಿ ಅಡಿಯಲ್ಲಿ ಬಿಗ್ ಡೇಟಾ ಅಂತ ಸ್ಟೋರ್ ಮಾಡಿ, ಟಾರ್ಗೆಟ್ ಅಡ್ವಟೈಸ್ಮೆಂಟ್ ನೀಡಲು ಬಳಸಿಕೊಳ್ಳುತ್ತಾರೆ. ಅದೇ ಕಾರಣಕ್ಕೆ ನೀವು ರಾತ್ರಿ ಮಲಗುವಾಗ ಫೋನ್ನಲ್ಲಿ ಏನು ನೋಡಿರುತ್ತೀರೋ, ಬೆಳಗ್ಗೆ ಎದ್ದು ಮೊಬೈಲ್ ಚೆಕ್ ಮಾಡಿದಾಗ ನೀವು ರಾತ್ರಿ ಸರ್ಚ್ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಹಾಗೆ ಜಾಹೀರಾತು ಕಾಣಿಸಿಕೊಳ್ಳಲು ಶುರುವಾಗಿರುತ್ತದೆ. ಹಿಂದಿನ ದಿನ ನೀವು ಸಿಂಪಲಾಗಿ ಗೂಗಲ್ ಸರ್ಚ್ನಲ್ಲಿ ಒಂದು ವಸ್ತುವಿನ ಬಗ್ಗೆ ಸರ್ಚ್ ಮಾಡಿದ್ದಾರೆ, ಮುಂದಿನ ಕೆಲವೇ ನಿಮಿಷಗಳಲ್ಲಿ ನೀವು ಯಾವುದೇ ಆಪ್ ಓಪನ್ ಮಾಡಿದರೂ ಸಹ ಅದೇ ವಸ್ತುವಿನ ಜಾಹೀರಾತು ಕಾಣಿಸುತ್ತದೆ. ಬಹುತೇಕ ಎಲ್ಲ ಮೊಬೈಲ್ ಕಂಪನಿಗಳು, ಗೂಗಲ್ ಸರ್ಚ್ ಇಂಜಿನ್, ಬಹುತೇಕ ಎಲ್ಲ ಶಾಪಿಂಗ್ ಅಪ್ಲಿಕೇಶನ್​​​ಗಳು ಈ ಕಿತಾಪತಿಯ ಕೆಲಸವನ್ನು ಮಾಡುತ್ತಿವೆ.

Hackerಗಳು ನಿಮ್ಮದೇ ಮೊಬೈಲ್ ಕ್ಯಾಮೆರಾ ಬಳಸಿ ನಿಮ್ಮ ಖಾಸಗಿ ದೃಶ್ಯಗಳನ್ನು ಕದಿಯುತ್ತಾರೆ
ಹೌದು ಫ್ರೆಂಡ್ಸ್.. ಹ್ಯಾಕರ್ ಗಳು ನಿಮ್ಮದೇ ಫೋನಿನ ಫ್ರಂಟ್ ಕ್ಯಾಮರಾ ಬಳಸಿ, ನಿಮ್ಮದೇ ಫೋನಿನ ಮೈಕ್ರೊಫೋನ್ ಬಳಸಿ ನೀವು ಯಾರ ಜೊತೆ ಇದ್ದೀರಿ, ಏನು ಮಾಡುತ್ತಿದ್ದೀರಿ ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳುವಷ್ಟು ತಂತ್ರಜ್ಞಾನ ಮುಂದುವರಿದಿದೆ. ಇದನ್ನು ಕೇವಲ ದುಷ್ಟ ವ್ಯಕ್ತಿಗಳು ಮಾತ್ರ ಮಾಡಬಹುದು ಅಂತ ಅಂದುಕೊಳ್ಳಬೇಡಿ. ನಮ್ಮ ಭದ್ರತಾ ಏಜೆನ್ಸಿಗಳು, ತನಿಖಾ ಸಂಸ್ಥೆಗಳೂ ಕೂಡ ಈ ತಂತ್ರಜ್ಞಾನವನ್ನು ಬಳಸಿಕೊಂಡು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು ಇಡಬಹುದು.

ಬಚಾವ್ ಆಗಲು ಏನು ಮಾಡಬೇಕು?
ಮೊದಲು ನಿಮ್ಮ ಫೋನಿನಲ್ಲಿ ಮಾಡಬಹುದಾದ ಒಂದಷ್ಟು ಬೇಸಿಕ್ ಸೆಟ್ಟಿಂಗ್ಸ್ ಹೇಳುತ್ತೇವೆ ಅಂತ ನೋಟ್ ಮಾಡಿಕೊಳ್ಳಿ. ನೋಟ್ ಮಾಡಿಕೊಳ್ಳಲಿಲ್ಲ ಅಂದ್ರೆ ಪರವಾಗಿಲ್ಲ. ಈ ವಿಡಿಯೋ ಇಲ್ಲೇ ಇರುತ್ತೆ. ಮತ್ತೊಮ್ಮೆ ನೋಡಬಹುದು. ಸೋ ಫಸ್ಟ್ ಆಫ್ ಆಲ್, ನಿಮ್ಮ ಮೊಬೈಲ್ ನಲ್ಲಿ ಲೊಕೇಶನ್ ಆಫ್ ಮಾಡಿ. ಮ್ಯಾಪ್ಸ್ ಯೂಸ್ ಮಾಡುವಾಗ ಅಥವಾ ಯಾರಿಗಾದರೂ ಲೊಕೇಶನ್ ಕಳಿಸುವಾಗ ಮಾತ್ರ ಆನ್ ಮಾಡಿಕೊಳ್ಳಿ. ಜೊತೆಗೆ ಆಪ್‌ಗಳನ್ನ ಇನ್ಸ್ಟಾಲ್ ಮಾಡಿದಾಗ ಒಳ್ಳೆ ಭೂಪರ ಥರಾ ಕೇಳಿದ ಎಲ್ಲಾ ಪರ್ಮಿಷನ್ ಗಳಿಗೆ ಅಲೋ ಅಲೋ ಮಾಡ್ತಾ ಹೋಗ್ಬೇಡಿ. ಆ ಆ್ಯಪ್​​ಗೆ ನಿಜವಾಗಿಯೂ ಯಾವ ಪರ್ಮಿಷನ್ ಅಗತ್ಯ ಇದೆ ಅದನ್ನ ಮಾತ್ರ ಅಲೋ ಮಾಡಿ. ಉದಾಹರಣೆಗೆ ನೀವು ಯಾವುದೋ ಕೀಬೋರ್ಡ್ ಇನ್ಸ್ಟಾಲ್ ಮಾಡಿಕೊಂಡಿರುತ್ತೀರಿ. ಆಗ ಅವರು ಸ್ಟೋರೇಜ್ ಕ್ಯಾಮೆರಾ ಮೈಕ್ರೊಫೋನ್ ಲೊಕೇಶನ್ ಫೈಲ್ಸ್ ಸೇರಿದಂತೆ ಇದ್ದಬದ್ದ ಎಲ್ಲಾ ಪರ್ಮಿಷನ್ ಕೇಳುತ್ತಾರೆ. ಖಂಡಿತ ಕೊಡಬೇಡಿ. ಕೀಬೋರ್ಡ್ ಅಪ್ಲಿಕೇಶನ್ ಗೆ ಎಲ್ಲ ಪರ್ಮಿಷನ್ ಏನ್ ಮಾಡಕ್ಕೆ? ಮೈಕ್ರೊಫೋನ್ at-least ಈಗ ವಾಯ್ಸ್ ಟೈಪಿಂಗ್ ಬಂದಿದೆ. ಅದಕ್ಕೆ ಯೂಸ್ ಆಗುತ್ತೆ ಅಂದುಕೊಳ್ಳೋಣ. ಲೋಕೇಶನ್ ಕ್ಯಾಮೆರಾ ಫೈಲ್ಸ್ ಎಲ್ಲಾ ಖಂಡಿತ ಕೊಡಬೇಡಿ. ಪ್ರತಿ ಆಪ್ ಇನ್ಸ್ಟಾಲ್ ಮಾಡಿದಾಗಲೂ ಆ ಕೆಲಸ ಮಾಡಲು ಅಗತ್ಯವಿರುವ ಪರ್ಮಿಷನ್ಸ್ ಮಾತ್ರ ಕೊಡಿ. ಜೊತೆಗೆ ಯಾವುದೇ ಕಾರಣಕ್ಕೂ ಆ್ಯಪ್​​​ನ್ನು ಮೊಬೈಲ್ ನಿಂದ ಮೊಬೈಲ್ ಗೆ ಕಳುಹಿಸಿಕೊಳ್ಳಬೇಡಿ. ಕೇವಲ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿ. ಪ್ಲೇ ಸ್ಟೋರ್ ನಲ್ಲಿ ಪ್ಲೇ ಪ್ರೋಟೆಕ್ಟ್ ಅಂತ ಆಪ್ಷನ್ ಇರುತ್ತೆ ಅದನ್ನು ಆನ್ ಮಾಡಿ. ನಂತರ ಸೆಟ್ಟಿಂಗ್ಸ್ ನಲ್ಲಿ ಗೂಗಲ್ ಸೆಟ್ಟಿಂಗ್ಸ್ ಗೆ ಹೋಗಿ ಡೇಟಾ ಅಂಡ್ ಪರ್ಸನಲೈಸೇಶನ್ ಆಪ್ಶನ್​​​ ಓಪನ್ ಮಾಡಿ ಅಲ್ಲಿ ವೆಬ್ ಅಂಡ್ ಆಪ್ ಆಕ್ಟಿವಿಟಿ ಆಪ್ಶನ್ ಆಫ್ ಮಾಡಿ. ಜೊತೆಗೆ ಅದೇ ಗೂಗಲ್ ಸೆಟ್ಟಿಂಗ್​​​​ನಲ್ಲಿ ಆಡ್ಸ್ ಸೆಕ್ಷನ್​​​ಗೆ ಹೋಗಿ ಆಡ್ಸ್ ಪರ್ಸನಲೈಸೇಶನ್ ಆಫ್ ಮಾಡಿ. ಜೊತೆಗೆ ವೆಬ್ ಬ್ರೌಸರ್​​​ನಲ್ಲಿ ಏನೇ ಸರ್ಚ್ ಮಾಡುವುದಿದ್ದರೂ ಪ್ರೈವೇಟ್ ಮೂಡ್ ನಲ್ಲಿ ಸರ್ಚ್ ಮಾಡಿ. ನೀವು ಗೂಗಲ್ ಕ್ರೋಮ್ ಯೂಸ್ ಮಾಡುತ್ತಿದ್ದರೆ, ಮೇಲೆ ರೈಟ್ ಕ್ಲಿಕ್ ಮಾಡಿದರೆ ನೀವು ಇಂಕಾಗ್ನಿಟೋ ಟಾಬ್ ಅಂತ ಆಪ್ಶನ್​​​  ಇರುತ್ತೆ. ಅದನ್ನು ಓಪನ್ ಮಾಡಿಕೊಂಡು ಅಲ್ಲಿ ಸರ್ಚ್ ಮಾಡಿ. ಪ್ರತಿ ಬ್ರೌಸರ್​​​ನಲ್ಲಿ ಒಂದಲ್ಲ ಒಂದು ಹೆಸರಲ್ಲಿ ಈ ಆಪ್ಶನ್ ಇರುತ್ತೆ. ಅದನ್ನು ಬಳಸಿಕೊಳ್ಳಿ. ಆಗ ನಿಮ್ಮ ಸರ್ಚ್ ಹಿಸ್ಟರಿ ಯಾರಿಗೂ ತಿಳಿಯುವುದಿಲ್ಲ. ನಿಮ್ಮ ಯಾವುದೇ ಡೇಟಾವನ್ನು ಈಸಿಯಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಪ್ರತಿಯೊಂದು ಅಪ್ ಗಳ ಬ್ಯಾಗ್ರೌಂಡ್ ಡೇಟಾ ಯುಸೇಜ್ ಮತ್ತು ಬ್ಯಾಗ್ರೌಂಡ್ ಬ್ಯಾಟರಿ ಯುಸೇಜ್ ಬಂದ್ ಮಾಡಿ. ಸೆಟ್ಟಿಂಗ್ಸ್ ನಲ್ಲಿ ಆಪ್ಸ್ ಗೆ ಹೋದರೆ ಪ್ರತಿ ಆಪ್ ನಲ್ಲೂ ಇದನ್ನು ಮಾಡೋಕ್ಕಾಗುತ್ತೆ. ಇದರಿಂದ ನೀವು ಬಳಸದೆ ಇದ್ದಾಗ ನಿಮ್ಮ ಫೋನ್ ನಿಮ್ಮ ಮೇಲೆ ಬೇಹುಗಾರಿಕೆ ಮಾಡುವುದು ತಪ್ಪುತ್ತೆ. ಬ್ಯಾಟರಿ ಕೂಡ ಉಳಿತಾಯವಾಗುತ್ತೆ.

ಇದಿಷ್ಟು ಮೊಬೈಲ್ನಲ್ಲಿ ಮಾಡಬಹುದಾದ ಒಂದಷ್ಟು ಸೆಟ್ಟಿಂಗ್. ಇನ್ನು ಹೊರಗೆ ಶಾಪಿಂಗ್ ಗೆ ಹೋದಾಗ ಕೇಳಿದ ಕಡೆಯಲ್ಲೆಲ್ಲ ಮೊಬೈಲ್ ನಂಬರ್​, ಇಮೇಲ್ ಐಡಿ ಕೊಡಬೇಡಿ. ಒಂದು ನಂಬರ್ ತುಂಬಾ ಪ್ರೈವೇಟ್ ಆಗಿ ಇಟ್ಟುಕೊಳ್ಳಿ. ಅದನ್ನು ಕೇವಲ ಸರ್ಕಾರಿ ದಾಖಲಾತಿ ಗಳಿಗೆ, ಅಫಿಶಿಯಲ್ ಕೆಲಸಗಳಿಗೆ ಬಳಸಿ. ಈ ಪ್ರವೇಟ್ ನಂಬರ್ ಗೆ ವಾಟ್ಸಪ್ ಕೂಡ ಹಾಕಬೇಡಿ. ಇನ್ನೊಂದು ಪಬ್ಲಿಕ್ ನಂಬರ್ ಇಟ್ಟುಕೊಳ್ಳಿ. ಇದನ್ನು ವಾಟ್ಸಪ್ ಸೇರಿದಂತೆ, ಸೋಶಿಯಲ್ ಮೀಡಿಯಾ ಗಳಿಗೆ, ಶಾಪಿಂಗ್ ಅಪ್ಲಿಕೇಶನ್​​ಗಳಿಗೆ, ಫ್ರೆಂಡ್ಸ್ ಅಂಡ್ ವರ್ಕ್ ಸರ್ಕಲ್ ಗೆ ನೀಡಿ. ಈ ರೀತಿ ಸ್ವಲ್ಪವಾದರೂ ನಿಮ್ಮ ಪ್ರೈವಸಿಯನ್ನು ಉಳಿಸಿಕೊಳ್ಳಲು ಪ್ರಯತ್ನಪಡಿ.

ಸೋ ಫ್ರೆಂಡ್ಸ್, ಇದು ಡಿಜಿಟಲ್ ಯುಗದಲ್ಲಿ ನಿಮಗೆ ನಿಮ್ಮ ಆನ್ಲೈನ್ ಮತ್ತು ಆಫ್ಲೈನ್ ಪ್ರೈವಸಿ ಬಗ್ಗೆ ಅರಿವು ಮೂಡಿಸುವ ಪ್ರಯತ್ನ. ಪ್ರೈವಸಿ ಅನ್ನೋದು ತುಂಬಾ ತುಂಬಾ ಇಂಪಾರ್ಟೆಂಟ್ ಫ್ರೆಂಡ್ಸ್. ಕೇರ್ಫುಲ್ ಅಗಿದಷ್ಟೂ ಒಳ್ಳೆಯದು…

Contact Us for Advertisement

Leave a Reply