ಚೀನಾ ಟೆನ್ನಿಸ್ ತಾರೆ ಪೆಂಗ್ ಶುವಾಯಿ ಸ್ವತಂತ್ರವಾಗಿರೋದೇ ಡೌಟು!

masthmagaa.com:

ಚೀನಾದ ಮಾಜಿ ಉಪ ಪ್ರಧಾನಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ಕೆಲಕಾಲ ನಾಪತ್ತೆಯಾಗಿ, ಬಳಿಕ ಲೈಂಗಿಕ ಕಿರುಕುಳ ಬಗ್ಗೆ ಯೂಟರ್ನ್​ ಹೊಡೆದಿದ್ದ ಚೀನಾದ ಟೆನ್ನಿಸ್​ ತಾರೆ ಪೆಂಗ್ ಶುವಾಯಿ ಸ್ವತಂತ್ರವಾಗಿದ್ದಾರೆ ಅನ್ನೋ ಬಗ್ಗೆ ಅನುಮಾನವಿದೆ ಅಂತ ಇತ್ತೀಚೆಗೆ ಆಕೆಯ ಸಂದರ್ಶನ ನಡೆಸಿದ ಪತ್ರಕರ್ತರೊಬ್ಬರು ಹೇಳಿದ್ದಾರೆ. ಇತ್ತೀಚೆಗಷ್ಟೇ ಫ್ರಾನ್ಸ್​ನ ಸ್ಪೋರ್ಟ್ಸ್​ ನ್ಯೂಸ್​ಪೇಪರ್​ ಲಿಕಿಪ್​​ಗೆ​ (L’Equipe) ಸಂದರ್ಶನ ನೀಡಿದ ಪೆಂಗ್ ಶುವಾಯಿ, ಲೈಂಗಿಕ ದೌರ್ಜನ್ಯನಾ? ನನ್ನ ಮೇಲೆ ಯಾರಾದ್ರೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತ ನಾನು ಯಾವತ್ತೂ ಹೇಳೇ ಇಲ್ಲ ಅಂತ ಹೇಳಿದ್ದರು. ಇದೀಗ ಅವರ ಇಂಟರ್ವ್ಯೂ ಮಾಡಿದ ಫ್ರಾನ್ಸ್​ನ ಪತ್ರಕರ್ತರು, ಆಕೆ ಸ್ವತಂತ್ರಳಾಗಿದ್ದಾಳೆಯೇ ಅನ್ನೋದು ಖಚಿತವಿಲ್ಲ ಎಂದಿದ್ದಾರೆ. ಈ ಮೂಲಕ ಚೀನಾ ಮೇಲಿನ ಅನುಮಾನ ಹೆಚ್ಚುವಂತೆ ಮಾಡಿದ್ದಾರೆ. ಯಾಕಂದ್ರೆ ಆಕೆ ಮೇಲೆ ಚೀನಾ ಸರ್ಕಾರ ಒತ್ತಡ ಹಾಕಿ ಲೈಂಗಿಕ ದೌರ್ಜನ್ಯದ ಆರೋಪದಿಂದ ಹಿಂದೆ ಸರಿಯುವಂತೆ ಮಾಡಿದೆ ಅನ್ನೋ ಅನುಮಾನ ಈಗಾಗಲೇ ಚೀನಾ ಮೇಲಿದೆ. ಇಂಥಾ ಟೈಮಲ್ಲೇ ಪತ್ರಕರ್ತರು ಈ ರೀತಿ ಹೇಳಿದ್ದಾರೆ. ಜೊತೆಗೆ ಇತ್ತೀಚೆಗೆ ಸಂದರ್ಶನ ನಡೆಸಿದ ರೂಮಿನಲ್ಲಿ ಪೆಂಗ್​ ಶುವಾಯಿ ಜೊತೆ ಚೀನಾದ ಅಧಿಕಾರಿಯೊಬ್ರು ಇದ್ರು ಅನ್ನೋದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply