ಚೆನ್ನೈ ತಲುಪಿದ ಮಾಹಿ..! ಸಿಎಸ್​ಕೆಯಿಂದ ಭರ್ಜರಿ ಸ್ವಾಗತ

ಚೆನ್ನೈ: ವಿಶ್ವಕಪ್ ಬಳಿಕ ಕ್ರಿಕೆಟ್​​ನಿಂದ ದೂರ ಉಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಐಪಿಎಲ್​ 2020ರಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. 38 ವರ್ಷದ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಆಟಗಾರ ಎಂ.ಎಸ್.ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ. ಇವರನ್ನು ಸಿಎಸ್​​ಕೆ ಅದ್ಧೂರಿಯಾಗಿ ಸ್ವಾಗತಿಸಿತು. ಮಾಹಿ ಸ್ವಾಗತದ ವಿಡಿಯೋವನ್ನು ಸಿಎಸ್​​ಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ.

ಧೋನಿ ನೇತೃತ್ವದಲ್ಲಿ ಸಿಎಸ್​​ಕೆ 3 ಬಾರಿ ಟ್ರೋಫಿ ಗೆದ್ದಿದೆ. ಆದ್ರೆ ಕಳೆದ ಬಾರಿ ಮುಂಬೈ ಇಂಡಿಯನ್ಸ್​ ತಂಡದ ಎದುರು ಫೈನಲ್​​ನಲ್ಲಿ ಸೋಲನುಭವಿಸಿತು. ಇನ್ನು ಧೋನಿಯವರ ಪರ್ಫಾರ್ಮೆನ್ಸ್ ನೋಡೋದಾದ್ರೆ, ಐಪಿಎಲ್​​ನಲ್ಲಿ ಚೆನ್ನೈ ಪರವಾಗಿ 160 ಪಂದ್ಯಗಳನ್ನಾಡಿದ್ದು, ಶೇ. 44.34 ಸರಾಸರಿ ಜೊತೆಗೆ 3,858 ರನ್ ಗಳಿಸಿದ್ದಾರೆ. ಈ ಬಾರಿ ಚೆನ್ನೈ ಸೂಪರ್​​ ಕಿಂಗ್ಸ್ ತಂಡ ಮಾರ್ಚ್​ 29ರಂದು ಮುಂಬೈನಲ್ಲಿ ಮುಂಬೈ ಇಂಡಿಯನ್ಸ್​ ತಂಡದೊಂದಿಗೆ ಮೊದಲ ಪಂದ್ಯವನ್ನು ಆಡಲಿದೆ.

Contact Us for Advertisement

Leave a Reply