ಇಸ್ರೇಲ್‌ ಹಡಗಿನ ಮೇಲೆ ದಾಳಿ! ಅಮೆರಿಕದಿಂದ ಬಂತು ಯುದ್ಧನೌಕೆ!

masthmagaa.com:

ಇರಾನ್‌ ಮತ್ತು ಇಸ್ರೇಲ್‌ ಮಧ್ಯೆ ಇನ್ನೇನು 24 ಗಂಟೆಗಳಲ್ಲಿ ಯುದ್ಧ ಶುರುವಾಗುತ್ತೆ ಅನ್ನೋ ಆತಂಕದ ಹೊತ್ತಲ್ಲೇ…ಕೊನೆಗೂ ಇರಾನ್‌ ಯುದ್ಧ ಶುರು ಮಾಡೇ ಬಿಡ್ತಾ ಅನ್ನೋ ಪ್ರಶ್ನೆ ಎದ್ದಿದೆ. ಇರಾನ್‌ ರೆವೊಲ್ಯುಷನರಿ ಗಾರ್ಡ್‌ನ ಕಮಾಂಡೋಗಳು ಇದೀಗ ಇಸ್ರೇಲ್‌ನ ಕಂಟೈನರ್‌ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ಯುಎಇ ಮತ್ತು ಇರಾನ್‌ ನಡುವಿನ ಹೊರ್ಮುಜ್‌ ಜಲಸಂಧಿ ಬಳಿ ದಾಳಿ ನಡೆಸಿ ಹಡಗನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಂತ ಶಿಪ್ಪಿಂಗ್‌ ಸೆಕ್ಯುರಿಟಿ ಏಜೆನ್ಸಿಗಳು ಮಾಹಿತಿ ನೀಡಿವೆ. ಇನ್ನು ಈ ಹಡಗನ್ನ ಪೋರ್ಚುಗಲ್‌ ಮೂಲದ MSC Aries ಅಂತ ಗುರುತಿಸಲಾಗಿದ್ದು, ಇದು ಭಾರತದ ಕಡೆ ಸಾಗಿ ಬರ್ತಿತ್ತು ಎನ್ನಲಾಗಿದೆ. ಈ ದಾಳಿ ಕುರಿತು ಮಿಡಲ್‌ಈಸ್ಟ್‌ನ ರಕ್ಷಣಾ ಅಧಿಕಾರಿ ವಿಡಿಯೋ ಒಂದನ್ನ ಶೇರ್‌ ಮಾಡಿದ್ದಾರೆ. ಇದ್ರಲ್ಲಿ ರೆವೊಲ್ಯುಷನರಿ ಗಾರ್ಡ್‌ನ ಕಮಾಂಡೋಗಳು ಹೆಲಿಕಾಪ್ಟರ್‌ ಬಳಸಿ ಹಡಗಿನ ಮೇಲೆ ಲ್ಯಾಂಡ್‌ ಆಗ್ತಿರೋದು ಸೆರೆಯಾಗಿದೆ. ಈ ಸಂದರ್ಭದಲ್ಲಿ ಹಡಗಿನ ಸಿಬ್ಬಂದಿ ಹೊರಗೆ ಬರ್ಬೇಡಿ ಅಂತ ಹಡಗಿನಲ್ಲಿರೋರಿಗೆ ಹೇಳ್ತಿರೋದು ಕೂಡ ಕೇಳಿಸಿದೆ. ಅಂದ್ಹಾಗೆ ಈ ಕಮಾಂಡೋಗಳು ಬಳಸಿರೋ ಹೆಲಿಕಾಪ್ಟರ್‌ ರಷ್ಯಾದ, ಸೋವಿಯತ್‌ ಕಾಲದ Mil Mi-17 ಹೆಲಿಕಾಪ್ಟರ್‌ನಂತೆ ಕಾಣಿಸ್ತಿತ್ತು. ಈ ಹೆಲಿಕಾಪ್ಟರ್‌ಗಳನ್ನ ರೆವೊಲ್ಯುಷನರಿ ಗಾರ್ಡ್‌ಗಳು ಹಾಗೂ ಯೆಮೆನ್‌ನ ಹೌತಿಗಳು ಈ ಹಿಂದೆ ಕೆಂಪು ಸಮುದ್ರದ ದಾಳಿಗಳಲ್ಲಿ ಯೂಸ್‌ ಮಾಡಿದ್ವು ಅಂತೇಳಲಾಗ್ತಿದೆ. ಇದಕ್ಕೆ ಇಸ್ರೇಲ್‌ ರೆಸ್ಪಾಂಡ್‌ ಮಾಡಿದ್ದು…. ಪರಿಸ್ಥಿತಿಯನ್ನ ಎಸ್ಕಲೇಟ್‌ ಮಾಡ್ತಿರೋದಕ್ಕೆ ಇರಾನ್‌ ತಕ್ಕ ಪರಿಣಾಮ ಎದುರಿಸಬೇಕಾಗುತ್ತೆ ಅಂತ ವಾರ್ನ್‌ ಮಾಡಿದೆ.

ಇನ್ನೊಂದ್ಕಡೆ ಭಾರೀ ಟೆನ್ಶನ್‌ನಲ್ಲಿರೋ ಅಮೆರಿಕ ಇದೀಗ ಇಸ್ರೇಲ್‌ಗೆ ಹೆಚ್ಚಿನ ಶಸ್ತ್ರಾಸ್ತ್ರ ನೆರವು ನೀಡೋಕೆ ಮುಂದಾಗಿದೆ. ಇಸ್ರೇಲ್‌ ಹಾಗೂ ಅಲ್ಲಿರೋ ಅಮೆರಿಕದ ಪಡೆಗಳ ರಕ್ಷಣೆಗಾಗಿ ಎರಡು ಡೆಸ್ಟ್ರಾಯರ್‌ ಯುದ್ಧನೌಕೆಗಳನ್ನ ಪೂರ್ವ ಮೆಡಿಟರೇನಿಯನ್‌ ಸಮುದ್ರಕ್ಕೆ ಕಳಿಸಿದೆ. ಈ ಪೈಕಿ ಒಂದು ಇತ್ತೀಚೆಗೆ ಕೆಂಪು ಸಮುದ್ರದಲ್ಲಿ ಹೌತಿಗಳ ಡ್ರೋನ್‌ ಮತ್ತು ಆ್ಯಂಟಿ-ಶಿಪ್‌ ಮಿಸೈಲ್‌ಗಳಿಂದ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ʻUSS Carneyʼ ನೌಕೆ ಇದೆ ಅಂತ ಅಮೆರಿಕ ಮಾಹಿತಿ ನೀಡಿದೆ.

ಇನ್ನು ಮಿಡಲ್‌ಈಸ್ಟ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗ್ತಿದ್ಹಾಗೆ ಏರ್‌ ಇಂಡಿಯಾದ ವಿಮಾನಗಳು ಇರಾನ್‌ನ ವಾಯುಪ್ರದೇಶದಲ್ಲಿ ಹಾರಾಟ ನಡೆಸೋದನ್ನ ಅವಾಯ್ಡ್‌ ಮಾಡ್ತಿವೆ. ಇದೀಗ ಭಾರತದಿಂದ ಲಂಡನ್‌ಗೆ ಹಾರಾಟ ನಡೆಸಿದ್ದ ಏರ್‌ ಇಂಡಿಯಾ ಫ್ಲೈಟೊಂದು, ಇರಾನ್‌ ಮೂಲಕ ಸಾಗದೇ.. ಲಾಂಗ್‌ ರೂಟ್‌ ತಗೊಂಡು ಲಂಡನ್‌ ತಲುಪಿದೆ. ಈ ರೀತಿ ಮಾಡೋದ್ರಿಂದ ಯುರೋಪ್‌ ಕಡೆ ಸಾಗೋ ಎಲ್ಲಾ ಏರ್‌ ಇಂಡಿಯಾ ವಿಮಾನಗಳೀಗ ಹೆಚ್ಚುವರಿ 45 ನಿಮಿಷಗಳನ್ನ ತೆಗೆದುಕೊಳ್ಳಲಿವೆ. ಆದ್ರೆ ಮಿಡಲ್‌ಈಸ್ಟ್‌ ಕಡೆ ಸಾಗೋ ಏರ್‌ ಇಂಡಿಯಾ ಫ್ಲೈಟ್ಸ್‌ಗೆ ಏನೂ ಸಮಸ್ಯೆ ಇಲ್ಲದೆ ಅವು ಇರಾನ್‌ನ ದಕ್ಷಿಣ ಭಾಗದಲ್ಲಿ ಹಾರಾಟ ನಡೆಸಿವೆ.

-masthmagaa.com

Contact Us for Advertisement

Leave a Reply