ಇಸ್ರೇಲ್‌ ಮೇಲಿನ ದಾಳಿಗೆ ಮುಂಚೆ ಅಮೆರಿಕಗೆ ಇರಾನ್‌ ಮಾಹಿತಿ!

masthmagaa.com:

ಇಸ್ರೇಲ್‌ನಲ್ಲಿ ಇರಾನ್‌ ದಾಳಿಯಿಂದ ಪರಿಸ್ಥಿತಿ ಕಂಗೆಟ್ಟಿರೋ ಕಾರಣದಿಂದ ಭಾರತ ಸರ್ಕಾರ ಇಸ್ರೇಲ್‌ನಲ್ಲಿರೋ ಭಾರತೀಯರಿಗೆ ಗೈಡ್‌ಲೈನ್ಸ್‌ ನೀಡಿದೆ. ಎಲ್ರೂ ಶಾಂತರಾಗಿರಿ ಹಾಗೂ ಸ್ಥಳೀಯ ಆಡಳಿತದ ಸೇಫ್ಟಿ ಪ್ರೊಟೊಕಾಲ್‌ಗಳನ್ನ ಫಾಲೋ ಮಾಡಿ ಅಂತೇಳಿದೆ. ಜೊತೆಗೆ ತುರ್ತು ಸಹಾಯ ಬೇಕಿದ್ರೆ ಈ ನಂಬರ್‌ಗಳಿಗೆ ಕಾಲ್‌ ಮಾಡಿ ಅಂತ ಇಸ್ರೇಲ್‌ ಹಾಗು ಇರಾನ್‌ ರಾಜಧಾನಿ ತೆಹ್ರಾನ್‌ನಲ್ಲಿರೋ ಭಾರತೀಯ ರಾಯಭಾರಿ ಕಚೇರಿಗಳ ಸಹಾಯವಾಣಿ ರಿಲೀಸ್‌ ಮಾಡಿದೆ. ಇನ್ನು ಅತ್ತ ಇಸ್ರೇಲ್‌ ಮೇಲೆ ದಾಳಿ ಮಾಡೋಕು ಮುಂಚೆ ಇರಾನ್‌, ಅಮೆರಿಕಗೆ ಮಾಹಿತಿ ನೀಡಿತ್ತು ಎನ್ನಲಾಗಿದೆ. ಇರಾನ್‌ ವಿದೇಶಾಂಗ ಸಚಿವ ಅಮಿರ್‌-ಅಬ್ದೊಲ್ಲಾಹಿನ್‌ ಈ ವಿಚಾರ ಬಹಿರಂಗಪಡಿಸಿದ್ದಾರೆ. ಇಸ್ರೇಲ್‌ ಮೇಲೆ ಚಿಕ್ಕದಾಗಿ, ನಮ್ಮ ಸೆಲ್ಫ್‌ ಡಿಫೆನ್ಸ್‌ಗೋಸ್ಕರ ಸೀಮಿತ ದಾಳಿ ಮಾಡ್ತೇವೆ ಅಂತ ಹೇಳಿದ್ವಿʼ ಅಂದಿದ್ದಾರೆ. ಇದಕ್ಕೆ ಪುಷ್ಠಿ ಕೊಡುವಂತೆ ಶನಿವಾರವೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಕುಟುಂಬ ಇಸ್ರೇಲ್‌ನಲ್ಲಿರೋ ಅಮೆರಿಕನ್‌ ವ್ಯಕ್ತಿಯೊಬ್ಬರ ಮನೆಗೆ ಶಿಫ್ಟ್‌ ಆಗಿರೋ ವಿಚಾರಾನೂ ವರದಿಯಾಗಿದೆ. US ಬಿಲಿಯನೇರ್‌ ಸೈಮನ್‌ ಫ್ಯಾಲಿಕ್‌ ಅವ್ರ ಮಿಸೈಲ್‌ ಪ್ರೂಫ್‌ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಅಕ್ಟೋಬರ್‌ 7ರ ಹಮಾಸ್‌ ದಾಳಿ ಟೈಮಲ್ಲಿ ಕೂಡ ನೆತನ್ಯಾಹು ಕುಟುಂಬ ಜೆರುಸಲೆಮ್‌ ಬಳಿ ಇರೋ ಈ ಮನೆಗೆ ಶಿಪ್ಟ್‌ ಆಗಿತ್ತು. ಈಗ ಮತ್ತೆ ಅದೇ ಮನೆಗೆ ಶಿಫ್ಟ್ ಆಗಿದ್ದಾರೆ.

-masthmagaa.com

Contact Us for Advertisement

Leave a Reply