ಇಸ್ರೇಲ್​​ನಲ್ಲಿ ವಿಶ್ವಾಸಮತ ಯಾಚನೆ ಯಾವಾಗ..?

masthmagaa.com:

ಇಸ್ರೇಲ್​​ನಲ್ಲಿ ಈಗಾಗಲೇ ನೆಫ್ತಾಲಿ ಬೆನೆಟ್ ಮತ್ತು ಯಾರ್ ಲ್ಯಾಪಿಡ್ ನೇತೃತ್ವದಲ್ಲಿ ಮೈತ್ರಿಕೂಟ ರಚನೆಯಾಗಿದ್ದು, ಇನ್ನೊಂದು ವಾರದಲ್ಲಿ ವಿಶ್ವಾಸಮತ ಯಾಚನೆ ನಡೆಯುತ್ತೆ ಅಂತ ಸ್ಪೀಕರ್ ಯಾರಿವ್ ಲೆವಿನ್ ಹೇಳಿದ್ದಾರೆ. ಆದ್ರೆ ಸರಿಯಾದ ಡೇಟ್ ಇನ್ನೂ ಕೂಡ ಹೇಳಿಲ್ಲ. ಈ ಸ್ಪೀಕರ್ ಯಾರಿವ್ ಲೆವಿನ್ ಸ್ವಲ್ಪ ಪ್ರಧಾನಿ ಬೆಂಜಮಿನ್ ನೆತಾನ್ಯಹು​ ಬೆಂಬಲಿಗ. .ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರೋ ನೆಫ್ತಾಲಿ ಬೆನ್ನೆಟ್​​​, ವಿಶ್ವಾಸಮತ ಯಾಚನೆಯಲ್ಲಿ ಡಿಲೇ ಮಾಡಬಾರದು. ಈ ಬುಧವಾರ ಅಂದ್ರೆ ನಾಳೆಯೇ ಆಯೋಜಿಸಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply