ಇಸ್ರೇಲ್‌ ಪ್ರಧಾನಿಗೆ ಹರ್ನಿಯಾ! ಯಶಸ್ವಿ ಶಸ್ತ್ರಚಿಕಿತ್ಸೆ!

masthmagaa.com:

ಗಾಜಾ ಯುದ್ಧ ನಡುವಲ್ಲಿ ಇದೀಗ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮಾರ್ಚ್‌ 31ರಂದು ಹರ್ನಿಯಾ ಸರ್ಜರಿ ಮಾಡಿಸಿಕೊಂಡಿದ್ದಾರೆ. ʻನೆತನ್ಯಾಹು ಅವ್ರು ಯಶಸ್ವಿಯಾಗಿ ಹರ್ನಿಯಾ ಸರ್ಜರಿ ಮಾಡಿಸ್ಕೊಂಡಿದ್ದಾರೆ. ಸದ್ಯ ಗುಡ್‌ ಕಂಡೀಷನ್‌ಲ್ಲಿದ್ದು…ರಿಕವರ್‌ ಆಗ್ತಿದ್ದಾರೆʼ ಅಂತ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ. ಅಂದ್ಹಾಗೆ ಮಾರ್ಚ್‌ 30ರಂದು ಬೆಂಜಮಿನ್‌ ಅವ್ರು ರೆಗ್ಯುಲರ್‌ ಚೆಕಪ್‌ ಮಾಡಿಸಿಕೊಂಡಾಗ ಅವ್ರಿಗೆ ಹರ್ನಿಯಾ ಇರೋ ವಿಚಾರ ಹೊರಬಿದ್ದಿತ್ತು. ನಂತ್ರ ಮರುದಿನವೇ ಸರ್ಜರಿಗೆ ಒಳಗೊಂಡಿದ್ದು…ಈಗ ಚೇತರಿಸಿಕೊಳ್ತಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply