ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ರಾಜಿನಾಮೆಗೆ ಆಗ್ರಹ!

masthmagaa.com:

ಯುದ್ಧದ ನಡುವೆಯೇ ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ವಿರುದ್ಧ ಪ್ರತಿಭಟನೆಗಳು ಜೋರಾಗಿವೆ. ಯುದ್ಧದಲ್ಲಿ ಸೀಜ಼್ ಫೈರ್‌ ತರೋಕೆ ಪಿಎಂ ನೇತನ್ಯಾಹು ಅವ್ರೇ ಅಡಚಣೆ ಆಗಿದ್ದಾರೆ ಅಂತ ಖುದ್ದು ಇಸ್ರೇಲಿ ಜನತೆ ಬೀದಿಗಿಳಿದಿದ್ದಾರೆ. ರಾಜಧಾನಿ ಟೆಲ್‌ ಅವೀವ್‌ ಹಾಗೂ ಜೆರುಸಲೆಮ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಸ್ರೇಲಿಗರು ಪ್ರತಿಭಟನೆ ಮಾಡ್ತಿದ್ದಾರೆ. ಅಲ್ಲದೆ ಗಾಜಾ ಯುದ್ಧವನ್ನ ಸರಿಯಾಗಿ ಹ್ಯಾಂಡಲ್‌ ಮಾಡ್ತಿಲ್ಲ ಅಂತೇಳಿ, ನೇತನ್ಯಾಹು ರಾಜಿನಾಮೆ ಕೊಡ್ಬೇಕು ಅಂತ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಟೆಲ್‌ ಅವೀವ್‌ನಲ್ಲಿ 16 ಪ್ರತಿಭಟನಾಕಾರರನ್ನ ಅರೆಸ್ಟ್‌ ಮಾಡಲಾಗಿದೆ. ಇನ್ನು ಭಾನುವಾರ ಈಜಿಪ್ಟ್‌ನ ಕೈರೋದಲ್ಲಿ ಕದನ ವಿರಾಮ ವಿಚಾರವಾಗಿ ಮತ್ತೊಂದು ಸುತ್ತಿನ ಮಾತುಕತೆ ಶುರುವಾಗಿದೆ.

-masthmagaa.com

Contact Us for Advertisement

Leave a Reply