ಇಸ್ರೇಲ್-ಗಾಜಾ ಸಂಘರ್ಷ! 41 ಮಂದಿಗೆ ಗಾಯ!

masthmagaa.com:

ಇತ್ತ ಅಪ್ಘಾನಿಸ್ತಾನದ ಸಮಸ್ಯೆ ಅದ್ರೆ ಆ ಕಡೆ ಇಸ್ರೇಲ್ ಮತ್ತು ಗಾಜಾ ನಡುವೆಯೂ ಹಿಂಸಾಚಾರ ಭುಗಿಲೆದ್ದಿದೆ. ಇಸ್ರೇಲ್ ಯುದ್ಧವಿಮಾನಗಳು ಗಾಜಾ ಪಟ್ಟಿಯಲ್ಲಿರೋ ಹಮಾಸ್ ತಾಣಗಳ ಮೇಲೆ ದಾಳಿ ನಡೆಸಿರೋದಾಗಿ ಇಸ್ರೇಲ್ ಸೇನೆ ಹೇಳಿದೆ. ಇದಕ್ಕೂ ಮುನ್ನ ಗಾಜಾ ಗಡಿಯಲ್ಲಿ ಹಮಾಸ್ ಬೆಂಬಲಿಗರು ಪ್ರತಿಭಟನೆ ಆಯೋಜಿಸಿದ್ರು. ಈ ವೇಳೆ ಕೆಲವರು ಇಸ್ರೇಲಿ ಯೋಧರ ಮೇಲೆ ಕಲ್ಲು, ಸ್ಫೋಟಕಗಳನ್ನು ಎಸೆದಿದ್ದಾರೆ. ಈ ವೇಳೆ ಇಸ್ರೇಲ್ ಸೇನೆ ಕೂಡ ಗುಂಡಿನ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ. ಓರ್ವ ಇಸ್ರೇಲ್ ಯೋಧ ಮತ್ತು 41 ಮಂದಿ ಪ್ಯಾಲೆಸ್ತೇನಿಯರು ಗಾಯಗೊಂಡಿದ್ದಾರೆ. ಅದ್ರಲ್ಲಿ 13 ವರ್ಷದ ಬಾಲಕ ಕೂಡ ಸೇರಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply