ಇಸ್ರೇಲ್ ಈಗ ವಿಶ್ವದ ಕೊರೋನ ಹಾಟ್ ಸ್ಪಾಟ್! ಕಾರಣ ಗೊತ್ತಾದ್ರೆ ಶಾಕ್ ಆಗುತ್ತೆ!

masthmagaa.com:

ಇಸ್ರೇಲ್ ಕೊರೋನ ಗೆದ್ದ ಮೊದಲ ದೇಶ ಅಂತಾ ಘೋಷಿಸಿಕೊಂಡಿತ್ತು. ಅತಿ ವೇಗವಾಗಿ ವ್ಯಾಕ್ಸಿನ್ ಹಾಕುತ್ತಿರೋ ದೇಶ ಅಂತ ಕರೆಸಿಕೊಂಡಿತ್ತು. ಬೇಗ ಬೇಗ ಲಾಕ್ಡೌನ್ ಎಲ್ಲ ಓಪನ್ ಮಾಡಿತ್ತು. ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋದ ಇಸ್ರೇಲ್ ಎರಡೂ ಡೋಸ್ ಲಸಿಕೆ ಆದವರಿಗೆ ಬೂಸ್ಟರ್ ಡೋಸ್ ಅಂತಾ ಮೂರನೇ ಡೋಸ್ ಕೂಡ ಹಾಕೋಕೆ ಶುರು ಮಾಡಿದೆ. ಇಷ್ಟೆಲ್ಲ ಮಾಡಿದರೂ ಈಗ ಇಡೀ ಜಗತ್ತಿನ ಕೊರೋನ ಹಾಟ್ ಸ್ಪಾಟ್ ಆಗಿದೆ ಇಸ್ರೇಲ್. ಇಲ್ಲಿನ ಜನಸಂಖ್ಯೆ ಬರೀ 90 ಲಕ್ಷ. ಅಷ್ಟರಲ್ಲೇ ಪ್ರತಿ ದಿನ 8-10 ಸಾವಿರ ಕೇಸಸ್ ಬರ್ತಿವೆ. ಕಳೆದ ವಾರ ಸೆಪ್ಟೆಂಬರ್ 2ನೇ ತಾರೀಕಂತೂ ಬರೋಬ್ಬರಿ 13 ಸಾವಿರಕ್ಕೂ ಅಧಿಕ ಹೊಸ ಕೇಸ್ ವರದಿಯಾಗಿದ್ದವು. ಈ ಗ್ರಾಫ್ ನೋಡಿದರೂ ಕೂಡ ನಿಮಗೆ ನೀಟಾಗಿ ಅರ್ಥ ಆಗುತ್ತೆ ಇಸ್ರೇಲ್ ನಲ್ಲಿ ಯಾವ ರೀತಿ ಮೂರನೇ ಅಲೆ ಬಂದು ಬಾರಿಸ್ತಿದೆ ಅಂತ. ಮೊದಲ ಅಲೆಗಿಂತ ಎರಡನೇ ಅಲೆ ಭಾರೀ ದೊಡ್ಡ ಕಂಡಿತ್ತು. ಆದ್ರೆ ಈಗ ಮೂರನೇ ಅಲೆ ಅದಕ್ಕಿಂತಲೂ ಬೃಹದಾಕಾರವಾಗಿ ಕಾಣ್ತಿದೆ. ಯಾಕೆ ಹೀಗಾಯ್ತು ಹಾಗಾದ್ರೆ,
ಕಾರಣ ನಂ.1
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸಾಂಪ್ರದಾಯಿಕ ಯಹೂದಿ ಮತ್ತು ಅರಬ್ಬರಲ್ಲಿ ಹಿಂಜರಿಕೆ
ಇದರ ಪರಿಣಾಮ ಹೆಚ್ಚಿನ ಹೊಸ ಪ್ರಕರಣಗಳು ಅನ್ ವ್ಯಾಕ್ಸಿನೇಟೆಡ್ ಜನರಿಂದಲೇ ಬರುತ್ತಿವೆ
ಕಾರಣ ನಂ.2
ಡೆಲ್ಟಾ ವೇರಿಯಂಟ್
ಕೊರೋನ ರೂಪಾಂತರಿ ಡೆಲ್ಟಾ ಅತ್ಯಂತ ವೇಗವಾಗಿ ಹರಡುತ್ತಿದೆ
ಕಾರಣ ನಂ.3
ಲಸಿಕೆ ಹಾಕಿಸಿಕೊಂಡವರಲ್ಲೂ ಕೊರೋನ ಪ್ರಕರಣಗಳು ಕಾಣಿಸಿಕೊಳ್ತಿರೋದು.
ಆದ್ರೆ ಇಂತವರ ಪ್ರಮಾಣ ಕಮ್ಮಿ ಇದೆ.
ಲಸಿಕೆಯಿಂದ ಕೆಲಕಾಲ ರಕ್ಷಣೆ – ಆಮೇಲೆ ನಿಧಾನಕ್ಕೆ ಪ್ರಭಾವ ಕಮ್ಮಿ

-masthmagaa.com

Contact Us for Advertisement

Leave a Reply