ಇದು ನಿಮ್ಮ ದೇಶ, ಇದನ್ನ ಬಿಟ್ಟು ಹೋಗಲು ಸಾಧ್ಯವಿಲ್ಲ: ಜನತೆಗೆ ತಾಲಿಬಾನ್ ಸೂಚನೆ

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಹಿಂದಿನ ಕ್ರೂರ ಆಡಳಿತವನ್ನೇ ಮತ್ತೆ ಶುರು ಮಾಡ್ಕೊಳ್ಳೋ ಎಲ್ಲಾ ಲಕ್ಷಣಗಳನ್ನು ತೋರಿಸ್ತಿದ್ದಾರೆ. ಹೀಗಾಗಿ ದಕ್ಷಿಣ ಅಫ್ಘಾನಿಸ್ತಾನದ ಮೂಲಕ ಜನ ಪಾಕಿಸ್ತಾನಕ್ಕೆ ಹೋಗ್ತಿದ್ದಾರೆ. ಆದ್ರೆ ಅವರನ್ನು ತಾಲಿಬಾನಿಗಳು ತಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಜನ, ಇಲ್ಲಿ ಕೆಲಸ ಇಲ್ಲ. ಏನಿಲ್ಲ. ಗಡಿ ದಾಟಿ ಪಾಕಿಸ್ತಾಕ್ಕೆ ಹೋಗೋಣ ಅಂದ್ರೆ ತಾಲಿಬಾನಿಗಳು ತಡೀತಾ ಇದ್ದಾರೆ. ಇದು ನಿಮ್ಮ ದೇಶ.. ಹೀಗಾಗಿ ದೇಶ ಬಿಟ್ಟು ಹೋಗಲು ಸಾಧ್ಯವಿಲ್ಲ ಅಂತ ಹೇಳ್ತಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ. ಮತ್ತೊಂದ್ಕಡೆ ಪಾಕಿಸ್ತಾನದ ಗಡಿ ಅಧಿಕಾರಿಗಳು ಕೂಡ ಅಫ್ಘನ್ನರನ್ನು ವಾಪಸ್ ಕಳುಹಿಸ್ತಿದ್ದಾರೆ. ಪ್ರತಿದಿನ 8ರಿಂದ 9 ಸಾವಿರ ಮಂದಿ ಗಡಿ ದಾಟೋಕೆ ಬರ್ತಿದ್ದಾರೆ ಅಂತ ತಾಲಿಬಾನಿಗಳು ತಿಳಿಸಿದ್ದಾರೆ.

ಇನ್ನು ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕಲಾವಿದರು ಕಂಗಾಲಾಗಿದ್ದಾರೆ. ಯಾಕಂದ್ರೆ ಇದಕ್ಕೆ ತಾಲಿಬಾನಿಗಳ ವಿರೋಧ ಇದೆ. ಇದನ್ನು ಪಾಶ್ಚಿಮಾತ್ಯೀಕರಣದ ಸಂಕೇತ ಅಂತ ತಾಲಿಬಾನ್ ಭಾವಿಸುತ್ತೆ. ಹೀಗಾಗಿ ಹೆದರಿಕೊಂಡಿರೋ ಕಲಾವಿದರು, ಅಫ್ಘಾನಿಸ್ತಾನದಲ್ಲಿ ಈ ಹಿಂದೆ ತಾವೇ ಬಿಡಿಸಿದ್ದ ಮಹಿಳೆಯರ ಚಿತ್ರಗಳನ್ನೆಲ್ಲಾ ಮಣ್ಣಲ್ಲಿ ಹೂತು ಹಾಕ್ತಿದ್ದಾರೆ. ಅದೇ ರೀತಿ ನಿರ್ಮಾಪಕರೊಬ್ಬರು ದೇಶ ತೊರೆಯುವಾಗ ಸುಮಾರು 20 ಸಿನಿಮಾಗಳಿರೋ ಹಾರ್ಡ್ ಡ್ರೈವ್ ಒಂದನ್ನು ರಹಸ್ಯ ಸ್ಥಳದಲ್ಲಿ ಇಟ್ಟಿದ್ದಾರೆ ಅಂತ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅದೇ ರೀತಿ ಬುಕ್ ಅಂಗಡಿಯವರು ದರಿ, ಪಶ್ತು ಭಾಷೆಯಲ್ಲಿರೋ ಬೈಬಲ್ ಸೇರಿದಂತೆ ಕೆಲವು ಪುಸ್ತಕಗಳನ್ನು ಬಚ್ಚಿಡ್ತಿದ್ದಾರೆ. ಒಂದ್ವೇಳೆ ಈ ಪುಸ್ತಕಗಳನ್ನು ನೋಡಿದ್ರೆ ತಾಲಿಬಾನಿಗಳು ನಮಗೆ ಖಂಡಿತಾ ಶಿಕ್ಷೆ ಕೊಡ್ತಾರೆ ಅಂತ ಅಂಗಡಿ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply