ಮಕ್ಕಳಿಗೆ ಯಾವಾಗ ಸಿಗುತ್ತೆ ಗೊತ್ತಾ ಝೈಡಸ್ ಕ್ಯಾಡಿಲಾ ಲಸಿಕೆ?

masthmagaa.com:

ಮಕ್ಕಳಿಗೆ ಲಸಿಕೆ ಹಾಕೋ ಬಗ್ಗೆ ಮತ್ತು ಅವರಲ್ಲಿ ಆರೋಗ್ಯದ ಸಮಸ್ಯೆ ಇರುವವರಿಗೆ ಆದ್ಯತೆ ನೀಡುವ ಸಂಬಂಧ ಜೈಡಸ್ ಕ್ಯಾಡಿಲಾ ಲಸಿಕೆ ಲಭ್ಯವಾಗುವ ಹೊತ್ತಿಗೆ ಘೋಷಿಸ್ತೀವಿ. ಅಕ್ಟೋಬರ್ ತಿಂಗಳಲ್ಲಿ ಝೈಡಸ್ ಕ್ಯಾಡಿಲಾ ಲಸಿಕೆ ಲಭ್ಯವಾಗಲಿದೆ ಅಂತ ಸರ್ಕಾರದ ಕೋವಿಡ್ ಪ್ಯಾನಲ್ ಚೀಫ್ ಎನ್​​ಕೆ ಅರೋರಾ ಹೇಳಿದ್ದಾರೆ. ದೇಶದಲ್ಲಿ 12ರಿಂದ 18 ವರ್ಷದ ಮಕ್ಕಳು 12 ಕೋಟಿಯಷ್ಟಿದ್ದಾರೆ. ಅವರಲ್ಲಿ 1 ಪರ್ಸೆಂಟ್​ಗೂ ಕಡಿಮೆ ಮಕ್ಕಳು ಮಾತ್ರವೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತ ಹೇಳಿದ್ರು. ಜೊತೆಗೆ ದೇಶದಲ್ಲಿ 18 ವರ್ಷ ಒಳಗಿನ 44 ಕೋಟಿ ಮಕ್ಕಳಿದ್ದಾರೆ. ಶಾಲೆಗೆ ಹೋಗೋದು ಏನೂ ಅಪಾಯವಲ್ಲ. ಕಳುಹಿಸಬಹುದು. ಆದ್ರೆ ಅವರ ಸುತ್ತಲೂ ರಕ್ಷಣಾ ಕವಚ ನಿರ್ಮಿಸೋ ಅನಿವಾರ್ಯತೆ ಇದೆ ಅಂತ ಹೇಳಿದ್ಧಾರೆ. ಅಂದಹಾಗೆ ಕಳೆದ ವಾರವಷ್ಟೇ 12ರಿಂದ 18 ವರ್ಷವರೆಗೆ ಝೈಡಸ್ ಕ್ಯಾಡಿಲಾ ಸಂಸ್ಥೆಯ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿತ್ತು.

-masthmagaa.com

Contact Us for Advertisement

Leave a Reply