ಪಾಕ್ ಆಟಗಾರನ ಮುಂದೆ ‘ಜೈ ಶ್ರೀರಾಮ್’ ಘೋಷಣೆ: ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಕಿಡಿ

masthmagaa.com:

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದಲ್ಲಿ ಪಾಕ್‌ ಆಟಗಾರರ ಮುಹಮ್ಮದ್‌ ರಿಜ್ವಾನ್‌ ಡ್ರೆಸ್ಸಿಂಗ್‌ ರೂಮ್‌ಗೆ ಹೋಗುವಾಗ ಅಲ್ಲಿದ್ದ ಪ್ರೇಕ್ಷಕರು ʻಜೈ ಶ್ರೀರಾಮ್‌ʼ ಅಂತ ಕೂಗಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ, ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಈ ವರ್ತನೆಯನ್ನ ಟೀಕಿಸಿರೊ ಉದಯನಿಧಿ, ಇದು ಒಳ್ಳೆ ನಡೆಯಲ್ಲ, ಇದನ್ನ ಒಪ್ಪಿಕೊಳ್ಳೋಕೆ ಸಾಧ್ಯವಿಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply