ಅವತಾರ್‌ 3,4,5 ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಜೇಮ್ಸ್‌ ಕ್ಯಾಮರೂನ್‌ !

masthmagaa.com:

ಅವತಾರ್‌ ಸಿನಿಮಾ ಇಡೀ ಪ್ರಪಂಚದಲ್ಲೇ ಸಂಚನಲವನ್ನ ಸೃಷ್ಠಿ ಮಾಡಿದಂತ ಸಿನಿಮಾ. ಡಿಸೆಂಬರ್ 18, 2009ರಂದು ರಿಲೀಸ್‌ ಆದ ಅವತಾರ್‌ ಸಿನಿಮಾ ಸಾಕಷ್ಟು ಹೆಸರು ಮಾಡಿತ್ತು. ನಂತರ ಡಿಸೆಂಬರ್ 16, 2022 ರಂದು ಅವತಾರ್‌ 2 ರಿಲೀಸ್‌ ಆಗಿತ್ತು. ಇದು ಕೂಡ ಸಿನಿ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್‌ ಅನ್ನ ಪಡೆದುಕೊಂಡಿತ್ತು. ಅವತಾರ್‌ ಸಿನಿಮಾದ ಮುಂದಿನ ಭಾಗವನ್ನ ನಿರ್ದೇಶಿಸೋಕೆ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್ ರೆಡಿಯಾಗಿದ್ದಾರೆ. ಈ ವಿಷಯ ಡಿಸ್ನೀ ಕಡೆಯಿಂದ ಘೋಷಣೆ ಆಗಿದೆ.

ಅವತಾರ್​ 2’ ಸಿನಿಮಾ ಕಳೆದ ವರ್ಷ ಡಿಸೆಂಬರ್​ 16ರಂದು ತೆರೆಕಂಡಿತು. ಈ ಸಿನಿಮಾದ ರಿಲೀಸ್​ಗೂ ಮುನ್ನ ಜೇಮ್ಸ್​ ಕ್ಯಾಮೆರೂನ್‌​ ಒಂದು ಮಾತು ಹೇಳಿದ್ದರು. ಒಂದು ವೇಳೆ ‘ಅವತಾರ್​ 2’ ಸೋತರೆ ಇನ್ನುಳಿದ ಸೀಕ್ವೆಲ್​ಗಳನ್ನು ಮಾಡೋದಿಲ್ಲ ಅಂತ ಅವರು ಹೇಳಿದ್ರು. ‘ಅವತಾರ್​ 2’ ಚಿತ್ರ ಗೆದ್ದಿರುವುದರಿಂದ ‘ಅವತಾರ್​ 3’ ಸಿನಿಮಾ ಮಾಡ್ತಾ ಇದ್ದಾರೆ ಜೇಮ್ಸ್ ಕ್ಯಾಮೆರಾನ್. ಈ ಮೊದಲು ಈ ಚಿತ್ರದ ಮುಂದಿನ ಭಾಗದ ರಿಲೀಸ್ ದಿನಾಂಕವನ್ನ ಘೋಷಣೆ ಮಾಡಿದ್ರು. ಆದ್ರೆ ಈಗ ಇದರಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ‘ಅವತಾರ್ 3’ 2024ರಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಈ ಸಿನಿಮಾ ಡಿಸೆಂಬರ್ 19, 2025ರಂದು ರಿಲೀಸ್‌ ಆಗಲಿದೆ. ನಾಲ್ಕನೇ ಪಾರ್ಟ್‌ 2029ರಲ್ಲಿ ಮತ್ತುಐದನೇ ಪಾರ್ಟ್‌ ಡಿಸೆಂಬರ್ 19, 2031ರಂದು ರಿಲೀಸ್‌ ಆಗಲಿದೆ. ಅಂದರೆ ಮೊದಲ ಚಿತ್ರ ಹೊರಬಂದ 22 ವರ್ಷಗಳ ನಂತರ ಈ ಸಿನಿಮಾದ ಕೊನೆಯ ಪಾರ್ಟ್‌ ರಿಲೀಸ್ ಆಗಲಿದೆ.

ಗ್ರಾಫಿಕ್ಸ್​ ಕೆಲಸಗಳು ಹೆಚ್ಚಿರುವುದರಿಂದ ಅದಕ್ಕೆ ಜಾಸ್ತಿ ಸಮಯ ಬೇಕಾಗಲಿದೆ. ಇನ್ನುಳಿದಂತೆ ‘ಅವತಾರ್​ 4’ ಮತ್ತು ‘ಅವತಾರ್​ 5’ ಚಿತ್ರಗಳಿಗೆ ಈಗಾಗಲೇ ಸ್ಕ್ರಿಪ್ಟ್​ ಸಿದ್ಧಗೊಂಡು, ರೆಡಿಯಾಗೋ ಹಂತದಲ್ಲಿದೆ.

-masthmagaa.com

Contact Us for Advertisement

Leave a Reply