ಏಕಾಂಗಿತನಕ್ಕೂ ಹೊಸ ಖಾತೆ, ಹೊಸ ಮಂತ್ರಿ!

masthmagaa.com:

ಜಪಾನ್​​ನಲ್ಲಿ ಇದೇ ಮೊದಲ ಬಾರಿಗೆ ಏಕಾಂಗಿತನ ನಿವಾರಣೆ ಖಾತೆ ಸೃಷ್ಟಿಸಲಾಗಿದೆ. ಕೊರೋನಾ ಬಳಿಕ ಜಪಾನ್​​ನಲ್ಲಿ 11 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಅದ್ರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ.

ಹೀಗಾಗಿ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಈ ತಿಂಗಳ ಆರಂಭದಲ್ಲಿ ತಮ್ಮ ಕ್ಯಾಬಿನೆಟ್​​​ಗೆ ಒಂಟಿತನ ನಿವಾರಣಾ ಖಾತೆಯನ್ನು ಸೃಷ್ಟಿಸಿದ್ರು. ಇದೀಗ ಅದಕ್ಕೆ ಮೊದಲ ಸಚಿವರಾಗಿ ಟೆಟ್ಸುಶಿ ಸಕಮೋಟೋ ಅವರನ್ನು ನೇಮಿಸಿದ್ದಾರೆ. ಅಂದಹಾಗೆ 2018ರಲ್ಲಿ ಮೊಟ್ಟ ಮೊದಲ ಬಾರಿಗೆ ಇಂಗ್ಲೆಂಡ್ ಈ ಖಾತೆಯನ್ನು ಸೃಷ್ಟಿಸಿತ್ತು.

-masthmagaa.com

Contact Us for Advertisement

Leave a Reply