ಚೀನಾ ಜಲಕ್ರೀಡೆ! ಜಪಾನ್‌ ದಿಗ್ಮೂಢ! ದಕ್ಷಿಣ ಸಮುದ್ರದಲ್ಲಿ ನಿನ್ನೆ ಏನಾಯ್ತು ಗೊತ್ತಾ?

masthmagaa.com:

ರಷ್ಯಾ – ಯುಕ್ರೇನ್‌ ಸಂಘರ್ಷದಿಂದ ಜಗತ್ತು ಏದುಸಿರೋ ಬಿಡ್ತಾಯಿದ್ರೆ ಇತ್ತ ನರಿ ಬುದ್ದಿ ಚೀನಾ ತನ್ನ ವರಸೆ ಸ್ಟಾರ್ಟ್‌ ಮಾಡ್ಕೊಂಡಿದೆ. ಜಗತ್ತಿನ ಗಮನವೆಲ್ಲಾ ಈಗ ಯುದ್ದನೆಲ ಯುಕ್ರೇನ್‌ ಕಡೆಗೆ ಕೇಂದ್ರಿಕೃತವಾಗಿದೆ. ಇದೇ ಸಮಯವನ್ನ ಬಂಡವಾಳ ಮಾಡಿಕೊಂಡಿರೋ ಚೀನಾ, ಶಾಂತವಾಗಿರೋ ದಕ್ಷಿಣ ಚೀನಾ ಸಮುದ್ರದಲ್ಲಿ ಬಿರುಗಾಳಿ ಎಬ್ಬಿಸೋ ಪ್ರಯತ್ನ ಮಾಡ್ತಿದೆ. ಕಳೆದ ಕೆಲ ವಾರಗಳಿಂದ ತೈವಾನ್‌ ವಿಚಾರವಾಗಿ ಅಮೆರಿಕ, ಜಪಾನ್‌, ಆಸ್ಟ್ರೇಲಿಯಾ,ಇಂಗ್ಲೆಂಡ್‌ಗಳು ಮೀಟಿಂಗ್‌ಗಳನ್ನ ನಡೆಸಿ ಪ್ರತಿತಂತ್ರ ಎಣೆಯುತ್ತಿದೆ ಅನ್ನೋ ಸುದ್ದಿಇತ್ತೀಚಿಗೆ ಹೊರ ಬರ್ತಾ ಇದ್ದಂತೆ, ಇತ್ತ ಚೀನಾ ಇದಕ್ಕೆ ಧಮ್ಕಿ ಹಾಕ್ಕೋ ರೀತಿ ಜಪಾನ್‌ಗೆ ಸೇರಿದ ದ್ವೀಪಗಳ ಬಳಿ ತನ್ನ ಯುದ್ದನೌಕೆಗಳನ್ನ ಗಸ್ತು ತಿರುಗಿಸಿದೆ. ಈ ಬಗ್ಗೆ ಜಪಾನ್‌ ರಕ್ಷಣಾ ಇಲಾಖೆ ಮಾಹಿತಿ ಕೊಟ್ಟಿದ್ದು ಸೋಮವಾರ, ಅಂದ್ರೆ ನಿನ್ನೆ ಚೀನಾಗೆ ಸೇರಿದ, ನೌಕಾಪಡೆಯ ಕೆಲ ಪ್ರಮುಖ ಅಸ್ತ್ರಗಳನ್ನು ಹೊಂದಿರೋ ನೌಕೆಗಳು ಜಪಾನ್‌ನ ಒಕಿನಾವ ಹಾಗು ಮಿಯಕೊಜಿಮಾ ದ್ವೀಪಗಳ ನಡುವೆ ಹಾದು ಹೋಗಿದೆ ಅಂತ ಆರೋಪ ಮಾಡಿದೆ. ಇದರಲ್ಲಿ ಒಂದು ವಿಮಾನ ವಾಹಕ ನೌಕೆ ಸೇರಿದಂತೆ 8 ವಾರ್ಶಿಪ್‌ಗಳು, ಡೆಸ್ಟ್ರಾಯರ್​​ಗಳು, ಹಾಗು ಇನ್ನಿತರ ಪ್ರಮುಖ ಯುದ್ದನೌಕೆಗಳು ಕೂಡ ಸೇರಿವೆ. ಅಲ್ದೇ ಚೀನಾದ ಲುಯಿನಿಂಗ್‌ ಪ್ರಾಂತ್ಯದ ಬಳಿ ಕೆಲ ಯುದ್ದ ಹೆಲಿಕಾಪ್ಟರ್ ಗಳು ಕೂಡ ಟೇಕಾಫ್ ಆಗಿ ಬಳಿಕ ಲ್ಯಾಂಡ್‌ ಆಗಿವೆ ಅಂತ ಆರೋಪದಲ್ಲಿ ಉಲ್ಲೇಖ ಮಾಡಲಾಗಿದೆ. ಆದಾಗ್ಯೂ ನಮ್ಮ ಸಾಗರದ ಯಾವುದೇ ಆಸ್ತಿಯ ಮೇಲೆ ದಾಳಿ ನಡೆಸಿಲ್ಲ..ಇದರಿಂದ ನಾವು ಕೂಡ ಯಾವುದೇ ರೆಸ್ಪಾಂಡ್‌ ಮಾಡ್ಲಿಲ್ಲ ಅಂತ ಜಪಾನ್‌ ಸ್ಪಷ್ಟಪಡಿಸಿದೆ.

-masthmagaa.com

Contact Us for Advertisement

Leave a Reply