ಜಪಾನ್‌, ಬ್ರಿಟನ್‌ಗೆ ತೀವ್ರ ಆರ್ಥಿಕತೆ ಹೊಡೆತ! ಜರ್ಮನಿ ಜಿಗಿತ!

masthmagaa.com:

ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರೋ ಜಪಾನ್ ಇದೀಗ ಸಡನ್‌ ಆಗಿ ಕುಸಿದಿದೆ. ಕಳೆದ ವರ್ಷದ ಕೊನೆಯಲ್ಲಿ ಜಪಾನ್‌ ಆರ್ಥಿಕತೆಯಲ್ಲಿ ಅನಿರೀಕ್ಷಿತ ಹಿಂಜರಿಕೆ ಕಂಡುಬಂದಿದೆ. ಈ ಮೂಲಕ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಸ್ಥಾನದಿಂದ ಕೆಳಗೆ ಜಾರಿದೆ. ಇದ್ರಿಂದ 4ನೇ ಸ್ಪಾಟ್‌ನಲ್ಲಿದ್ದ ಜರ್ಮನಿ ಮೇಲೆದ್ದು ಇದೀಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಅಂತ ಗುರುತಿಸಿಕೊಂಡಿದೆ. ಇನ್ನು ಜಪಾನ್‌ ಬೆನ್ನಿಗೆ ಆರ್ಥಿಕತೆಯ ವಕ್ರದೃಷ್ಟಿ ರಿಷಿ ಸುನಕ್‌ರ ಬ್ರಿಟನ್‌ ಮೇಲೂ ನಾಟಿದೆ. ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆ ಹೊಂದಿರೋ ಬ್ರಿಟನ್‌ಲ್ಲೂ ಕಳೆದ ವರ್ಷದ ಸೆಕೆಂಡ್‌ ಹಾಫ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಅಲ್ಲಾಂದ್ರೂ, ಸ್ವಲ್ಪ ಮಟ್ಟಿಗೆ ಆರ್ಥಿಕ ಹಿಂಜರಿಕೆಯಾಗಿದೆ. ಹೀಗಂತ ಆಫೀಸ್‌ ಫಾರ್‌ ನ್ಯಾಷನಲ್‌ ಸ್ಟ್ರಾಟಿಸ್ಟಿಕ್ಸ್‌ ಫೆಬ್ರುವರಿ 15 ರಂದು ರಿಲೀಸ್‌ ಮಾಡಿರೋ ಅಂಕಿ ಅಂಶಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply