masthmagaa.com:

JEE (Mains) ಪರೀಕ್ಷೆ ಬರೆಯುವವರೇ ಇಲ್ಲಿ ಸ್ವಲ್ಪ ಗಮನ ಕೊಡಿ. JEE (Mains) ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಬದಲಾವಣೆ ಮಾಡಿದೆ. ಈ ಪರೀಕ್ಷೆಯನ್ನ 4 ಬಾರಿ ನಡೆಸಲು ನಿರ್ಧರಿಸಲಾಗಿದೆ. ಫೆಬ್ರವರಿ, ಮಾರ್ಚ್, ಏಪ್ರಿಲ್​ ಮತ್ತು ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಅವಕಾಶ ನೀಡಲು ಹೀಗೆ ಮಾಡಲಾಗಿದೆ. ಮೊದಲ ಹಂತದ ಪರೀಕ್ಷೆಯು ಫೆಬ್ರವರಿ 23ರಿಂದ 26ರವರೆಗೆ ನಡೆಯಲಿದೆ. ಕೊನೆಯ ಪರೀಕ್ಷೆ ನಡೆದ ನಾಲ್ಕೈದು ದಿನಗಳಲ್ಲಿ ರಿಸಲ್ಟ್ ಘೋಷಿಸಲಾಗುತ್ತೆ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​ ಹೇಳಿದ್ದಾರೆ. ಅಲ್ಲದೆ ನೂತನ ಶಿಕ್ಷಣ ನೀತಿ ಅಡಿಯಲ್ಲಿ ಇನ್ಮುಂದೆ JEE (Mains) ಪರೀಕ್ಷೆ ಕನ್ನಡ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಬರೆಯಬಹುದು. ಹಿಂದಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಮಲಯಾಳಂ, ಅಸ್ಸಾಮಿ, ಬಂಗಾಳಿ, ಗುಜರಾತಿ, ಒಡಿಯಾ, ಪಂಜಾಬಿ, ಉರ್ದು, ಮರಾಠಿ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ವಿದ್ಯಾರ್ಥಿಗಳಿಗೆ ಆಫ್​ಲೈನ್​ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಒಟ್ಟು 90 ಪ್ರಶ್ನೆಗಳಿರುತ್ತವೆ. ಇದರಲ್ಲಿ 75 ಪ್ರಶ್ನೆಗಳನ್ನ ಬಗೆಹರಿಸಬೇಕು. ಉಳಿದ 15 ಪ್ರಶ್ನೆಗಳು ಆಪ್ಷನಲ್​ ಪ್ರಶ್ನೆಗಳಾಗಿರುತ್ತವೆ. ಅಲ್ಲದೆ ನೆಗೆಟಿವ್ ಮಾರ್ಕಿಂಗ್ ಇರೋದಿಲ್ಲ. ಅಂದ್ರೆ ತಪ್ಪು ಉತ್ತರಕ್ಕೆ ಋಣಾತ್ಮಕ ಮಾರ್ಕ್ಸ್ ಇರೋದಿಲ್ಲ. ವಿದ್ಯಾರ್ಥಿಗಳು ಪಡೆದ ಸ್ಕೋರ್ ಆಧಾರದಲ್ಲಿ ಮೆರಿಟ್​ ಲಿಸ್ಟ್ ಮತ್ತು ಶ್ರೇಯಾಂಕವನ್ನ ಸಿದ್ಧಪಡಿಸಲಾಗುತ್ತದೆ. ಅಂದ್ಹಾಗೆ ಐಐಟಿ ಮತ್ತು ಎನ್​ಐಟಿಗಳ ಪ್ರವೇಶಾತಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು JEE (Mains) ಪರೀಕ್ಷೆಗಳನ್ನ ನಡೆಸುತ್ತೆ.

-masthmagaa.com

Contact Us for Advertisement

Leave a Reply