ಕ್ರಿಕೆಟ್​​ನಲ್ಲಿ ಪಾಕ್ ಗೆದ್ದಿದ್ದಕ್ಕೆ ಸಂಭ್ರಮ! ಕಾಶ್ಮೀರದಲ್ಲಿ ವಿದ್ಯಾರ್ಥಿಗಳ ವಿರುದ್ಧ ಕೇಸ್!

masthmagaa.com:

ಟಿ ಟ್ವೆಂಟಿ ವಿಶ್ವಕಪ್​​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿದ್ದಕ್ಕೆ ಸಂಭ್ರಮಿಸಿದ ಶ್ರೀನಗರದ ವೈದ್ಯಕೀಯ ವಿದ್ಯಾರ್ಥಿನಿಯರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆ ಮತ್ತು ಯುಎಪಿಎ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಶೆರೆ ಕಾಶ್ಮೀರ್​ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ಗರ್ಲ್ಸ್​ ಹಾಸ್ಟೆಲ್​ನಲ್ಲಿ ಈ ಸಂಭ್ರಮಾಚರಣೆ ನಡೆದಿದೆ. ಇದ್ರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದ್ರಲ್ಲಿ ವಿದ್ಯಾರ್ಥಿನಿಯರು ಪಾಕಿಸ್ತಾನ ಪರವಾಗಿ ಘೋಷಣೆ ಕೂಗೋದನ್ನ ನೋಡ್ಬೋದಾಗಿದೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರೋ ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಪಾಕ್ ಗೆಲುವನ್ನು ಸಂಭ್ರಮಿಸ್ತಿರೋ ಕಾಶ್ಮೀರಿಗಳ ಮೇಲೆ ಸಿಟ್ಯಾಕೆ..? ಜಮ್ಮು ಕಾಶ್ಮೀರ ವಿಭಜನೆಯಾಗಿ, ವಿಶೇಷ ಸ್ಥಾನಮಾನ ರದ್ದಾದಾಗ ಎಷ್ಟು ಮಂದಿ ಸಿಹಿ ಹಂಚಿ ಸಂಭ್ರಮಿಸಿದ್ರು ಅನ್ನೋದನ್ನ ಮರೆತಿಲ್ಲ ಅಂತ ವಿಷ ಉಗುಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರೋ ಹರಿಯಾಣ ಸಚಿವ ಅನಿಲ್ ವಿಜ್, ಮೆಹಬೂಬಾ ಮುಫ್ತಿ ಡಿಎನ್​ಎ ಡಿಫೆಕ್ಟಿವ್ ಆಗಿದೆ ಅಂತ ಹೇಳಿದ್ದಾರೆ.

ಇನ್ನು ಭಾನುವಾರದ ಪಂದ್ಯದ ಬಳಿಕ ಭಾರಿ ಟೀಕೆಗೆ ಗುರಿಯಾದ ಟೀಂ ಇಂಡಿಯಾ ವೇಗಿ ಮೊಹ್ಮದ್ ಶಮಿ ಪರವಾಗಿ ರಾಹುಲ್ ಗಾಂಧಿ, ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply