ದೆಹಲಿಯ ಜೆಎನ್‌ಯು, ಜಾಮಿಯಾ ವಿಶ್ವವಿದ್ಯಾಲಯಗಲ್ಲಿ ಹೊತ್ತಿದ ಮೋದಿ ಡ್ಯಾಕುಮೆಂಟ್ರಿ ಕಿಡಿ!

masthmagaa.com:

ಬಿಬಿಸಿ ತಯಾರಿಸಿರೋ ಪ್ರಧಾನಿ ಮೋದಿ ಅವ್ರ ಡ್ಯಾಕುಮೆಂಟ್ರಿ ʻಇಂಡಿಯಾ: ದ ಮೋದಿ ಕ್ವೆಶ್ಚನ್‌ʼ ವಿವಾದ ತೀವ್ರಗೊಂಡಿದೆ. ಇದೀಗ ಈ ಸಾಕ್ಷ್ಯಚಿತ್ರವನ್ನ ವೀಕ್ಷಿಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟದ ಆರೋಪಗಳು ಕೇಳಿ ಬಂದಿವೆ. ಜೆಎನ್‌ಯು ವಿದ್ಯಾರ್ಥಿ ಸಂಘ ಡಾಕ್ಯುಮೆಂಟರಿಯನ್ನ ನೆನ್ನೆ ರಾತ್ರಿ ಸ್ಕ್ರೀನಿಂಗ್‌ ಮಾಡೋಕೆ ಸಮಯ ನಿಗದಿ ಮಾಡಿತ್ತು. ಆದ್ರೆ ವಿಶ್ವವಿದ್ಯಾಲಯದ ಆಡಳಿತ ಸ್ಕ್ರೀನಿಂಗ್‌ಗೆ ಪರ್ಮಿಷನ್‌ ಕೊಡೋಕೆ ನಿರಾಕರಿಸಿ, ಸಾಕ್ಷ್ಯಚಿತ್ರ ಪ್ರದರ್ಶಿಸಿದ್ರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಅಂತ ತಿಳಿಸಿತ್ತು. ಅಷ್ಟೆ ಅಲ್ದೆ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ವಿದ್ಯುತ್‌ ಮತ್ತು ಇಂಟರ್‌ನೆಟ್‌ನ್ನ ಸ್ಥಗಿತಗೊಳಿಸಲಾಗಿತ್ತು. ಆದರೂ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳ ಮೂಲಕ ಡಾಕ್ಯುಮೆಂಟರಿಯನ್ನ ವೀಕ್ಷಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಮೇಲೆ ಕಲ್ಲುಗಳನ್ನ ಎಸೆಯಲಾಗಿದೆ ಅಂತ ಆರೋಪಿಸಲಾಗಿದೆ. ಜೊತೆಗೆ ಈ ಕೃತ್ಯ ಮಾಡಿರೋದು ಎಬಿವಿಪಿಯವ್ರೇ ಅಂತ ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದಲ್ಲೂ ಕೂಡ ಡ್ಯಾಕುಮೆಂಟ್ರಿಯ ಪ್ರದರ್ಶನಕ್ಕೆ ಸಿದ್ದತೆ ನಡೆಸಿದ ಆರೋಪದ ಮೇಲೆ ಕೆಲವು ವಿದ್ಯಾರ್ಥಿಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ವಿವಿಯ ಗೇಟ್‌ ಮುಂಭಾಗದಲ್ಲಿ ಪೊಲೀಸ್‌ ಸಿಬ್ಬಂದಿಯನ್ನ ನಿಯೋಜಿಸಲಾಗಿದ್ದು, ಅಶ್ರುವಾಯು ಮತ್ತು ಜಲಫಿರಂಗಿಗಳ ವಾಹನಗಳನ್ನು ಗೇಟ್‌ಬಳಿ ನಿಲ್ಲಿಸಲಾಗಿದೆ. ಜೊತೆಗೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಅನಧಿಕೃತವಾಗಿ ಗುಂಪು ಸೇರೋದನ್ನ ನಿಷೇಧಿಸಲಾಗಿದೆ ಅಂತ ವಿವಿ ಆಡಳಿತ ಮಂಡಳಿ ಹೇಳಿದೆ.

-masthmagaa.com

Contact Us for Advertisement

Leave a Reply