masthmagaa.com:

ಕಳೆದ ತಿಂಗಳು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ಗೆಲುವು ದಾಖಲಿಸಿದ್ದಾರೆ ಅಂತ ಎಲೆಕ್ಟೊರಲ್ ಕಾಲೇಜ್ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪ ಮಾಡಿ ಸೋಲನ್ನು ಒಪ್ಪಿಕೊಳ್ಳದೆ ಕಾನೂನು ಹೋರಾಟ ನಡೆಸುತ್ತಿದ್ದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್​ ಟ್ರಂಪ್​ಗೆ ಸೋಲುಂಟಾಗಿದೆ. ಇದರ ಬೆನ್ನಲ್ಲೇ ಮಾತನಾಡಿರುವ ಬೈಡೆನ್, ‘ಕೊನೆಗೂ ಜನರ ಇಚ್ಛಾಶಕ್ತಿಯೇ ಮೇಲುಗೈ’ ಸಾಧಿಸಿದೆ ಅಂತ ಹೇಳಿದ್ದಾರೆ.

ಒಟ್ಟು 538 ಎಲೆಕ್ಟೊರಲ್ ಕಾಲೇಜ್​ ಮತಗಳ ಪೈಕಿ ಬಹುಮತ ಗಳಿಸಲು 270 ಮ್ಯಾಜಿಕ್ ನಂಬರ್ ದಾಟಬೇಕಿತ್ತು. ಇದರಲ್ಲಿ ಬೈಡೆನ್ 306 ಮತಗಳನ್ನ ಪಡೆದರೆ, ಟ್ರಂಪ್ 232 ಮತಗಳನ್ನ ಪಡೆದಿದ್ದಾರೆ. ಟ್ರಂಪ್​ ಎಲೆಕ್ಟೋರಲ್ ಕಾಲೇಜ್​ ಮತಗಳಲ್ಲಿ ಸೋತಿದ್ದು ಮಾತ್ರವಲ್ಲ ಅವರ ಸೋಲಿನ ಅಂತರ ಬರೋಬ್ಬರಿ 70 ಲಕ್ಷ ಮತಗಳು ಅನ್ನೋದು ಗಮನಾರ್ಹ. ಜೋಸೆಫ್ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ 78 ವರ್ಷದ ಬೈಡೆನ್ ಅಮೆರಿಕ ಕಾಣುವ ಅತಿ ಹಿರಿಯ ಅಧ್ಯಕ್ಷ ಎನಿಸಲಿದ್ದಾರೆ.

-masthmagaa.com

Contact Us for Advertisement

Leave a Reply