99.6 ಲಕ್ಷ ಕೋಟಿ ರೂ. ಪ್ಯಾಕೇಜ್‌ಗೆ ಸಹಿ ಹಾಕಿದ ಜೋ ಬೈಡನ್‌!

masthmagaa.com:

ಅಮೆರಿಕ ಸರ್ಕಾರ ದುಡ್ಡಿಲ್ಲದೇ ಸಡನ್ನಾಗಿ ಬಂದ್‌ ಆಗೋದನ್ನ ತಡೆಯೋಕೆ ಇದೀಗ ಅಧ್ಯಕ್ಷ ಜೋ ಬೈಡನ್‌ ಅವ್ರು 1.2 ಟ್ರಿಲಿಯನ್‌ ಡಾಲರ್‌ ಪ್ಯಾಕೇಜ್‌ಗೆ ಸೈನ್‌ ಮಾಡಿದ್ದಾರೆ. ಅಂದ್ರೆ ಸುಮಾರು 99.6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ಯಾಕೇಜ್‌ ಅಮೆರಿಕ ಸಂಸತ್ತಿನಲ್ಲಿ ಪಾಸ್‌ ಮಾಡಲಾಗಿದೆ. ಈ ಮೂಲಕ ಅಮೆರಿಕ ಸರ್ಕಾರ ಭಾಗಶಃ ಸ್ಥಗಿತವಾಗೋದನ್ನ ತಡೆಯಲಾಗಿದೆ. ಅಲ್ದೇ ಈ ಪ್ಯಾಕೇಜ್‌ ಬೈಡನ್‌ ಸರ್ಕಾರಕ್ಕೆ ಸೆಪ್ಟೆಂಬರ್‌ ತನಕ ಪೂರ್ಣ ಪ್ರಮಾಣದಲ್ಲಿ ಫಂಡಿಂಗ್‌ ಮಾಡಲಿದೆ. ಹೀಗಂತ ಅಮೆರಿಕದ ವೈಟ್‌ ಹೌಸ್‌ ಕನ್ಫರ್ಮ್‌ ಮಾಡಿದೆ. ಅಂದ್ಹಾಗೆ ಮಾರ್ಚ್‌ ಪ್ರಾರಂಭದಲ್ಲಿ 459 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 38 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್‌ ಅಮೆರಿಕದ ಸಂಸತ್ತಿನಲ್ಲಿ ಪಾಸ್‌ ಮಾಡಲಾಗಿತ್ತು. ಆದ್ರೆ ಇದು ಅಲ್ಪಾವಧಿಗೆ ಫಂಡಿಂಗ್‌ ಮಾಡೋ ಪ್ಯಾಕೇಜ್‌ ಆಗಿತ್ತು. ಈಗ ಸೆಪ್ಟೆಂಬರ್‌ ತನಕ ಅಮೆರಿಕಕ್ಕೆ ಫಂಡಿಂಗ್‌ ಮಾಡೋ ಭಾರೀ ಮೊತ್ತದ ಪ್ಯಾಕೇಜ್‌ಗೆ ಬೈಡನ್‌ ಸಹಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply