ನಶಾ ಸಾಮಾಗ್ರಿ ಬಳಸಿದ ಆರೋಪಿಗಳಿಗೆ ಬೈಡನ್‌ ಕ್ಷಮೆ!

masthmagaa.com:

ಮರಿಜುವಾನಾ ಅಂದ್ರೆ ಗಾಂಜಾದಂತ ನಶಾ ಸಾಮಾಗ್ರಿ ಇಟ್ಕೊಂಡಿರೋರು ಮತ್ತದನ್ನ ಬಳಿಸಿರೋ‌ ಸಾವಿರಾರು ದೋಷಿಗಳ ಅಪರಾಧವನ್ನ ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮನ್ನಿಸಿದ್ದಾರೆ. ಹೀಗಂತ ವೈಟ್‌ ಹೌಸ್‌ ಡಿಸೆಂಬರ್‌ 22 ರಂದು ಹೊರಡಿಸಿರೋ ಆದೇಶದಲ್ಲಿ ತಿಳಿಸಿದೆ. ಜೊತೆಗೆ ಅಹಿಂಸಾತ್ಮಕ ಮಾದಕವಸ್ತು ಬಳಸಿರೋ ಅಪರಾಧದಲ್ಲಿ ಜೈಲುವಾಸದಲ್ಲಿರೋ 11 ಅಮೆರಿಕನ್‌ ಜನರ ಶಿಕ್ಷೆಯನ್ನ ಕೂಡ ಕಡಿಮೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಜೋ ಬೈಡನ್‌, ʻಮರಿಜುವಾನಾ ಬಳಕೆ ಮತ್ತು ಇಟ್ಕೊಂಡಿರೋ ಕ್ರಿಮಿನಲ್‌ ರೆಕಾರ್ಡ್ಸ್‌ನಿಂದಾಗಿ ಉದ್ಯೋಗ, ವಸತಿ ಮತ್ತು ಎಜ್ಯುಕೇಷನಲ್‌ ಅಪಾರ್ಚುನಿಟಿಗಳ ಮೇಲೆ ಅಗತ್ಯವಿಲ್ಲದ ಅಡ್ಡಿಯನ್ನ ಹೇರಲಾಗಿದೆ. ಇದ್ರ ಬಗ್ಗೆ ಜಾಸ್ತಿ ಗಮನ ಹರಿಸದೇ ಅದೆಷ್ಟೋ ಜನರ ಜೀವನ ಮೇಲ್ಕೆಳಗಾಗಿ ಬಿಟ್ಟಿದೆ. ಆದ್ರಿಂದ ನಮ್ಮ ಮಿಸ್ಟೇಕ್‌ಗಳನ್ನ ಸರಿ ಮಾಡೋ ಸಮಯವಿದುʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply