ಚಿಕ್ಕಪ್ಪನ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ‌ ಅಮೆರಿಕ ಅಧ್ಯಕ್ಷ!

masthmagaa.com:

ʻಎರಡನೇ ಮಹಾಯುದ್ದದ ವೇಳೆ ಸ್ಥಳೀಯ ಸೇನೆಯಲ್ಲಿದ್ದ ನನ್ನ ಚಿಕ್ಕಪ್ಪ ಅಂಬ್ರೋಸ್‌ ಪಿನ್ನೆಗನ್‌ ಅವ್ರನ್ನ ನರಭಕ್ಷಕರು ತಿಂದು ಹಾಕಿದ್ದಾರೆʼ ಅಂತ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ʻಅವರಿದ್ದ ವಿಮಾನವನ್ನ ಬಹಳಷ್ಟು ನರಭಕ್ಷಕರಿದ್ದ ನ್ಯೂ ಗಿನಿಯಾದ ಪ್ರದೇಶವೊಂದರಲ್ಲಿ ಹೊಡೆದುರುಳಿಸಲಾಗಿತ್ತು. ಆದ್ರೆ ಅವ್ರ ಶವವನ್ನ ಅಮೆರಿಕ ಸರ್ಕಾರ ಮರಳಿ ಪಡೆಯೊ ಕೆಲ್ಸ ಮಾಡಿಲ್ಲ. ನಾನು ಸ್ಥಳಕ್ಕೆ ಭೇಟಿ ನೀಡ್ದಾಗ ವಿಮಾನದ ಕೆಲ ಭಾಗಗಳು ಪತ್ತೆಯಾಗಿದ್ವು ಅಷ್ಟೆʼ ಅಂತೇಳಿದ್ಧಾರೆ. ಅಂದ್ಹಾಗೆ ಪೆನ್ಸಿಲ್ವೇನಿಯಾದ ಸ್ಕ್ರಾಂಟನ್‌ನ ಯುದ್ದ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬೈಡನ್‌ ಈ ಹೇಳಿಕೆ ನೀಡಿದ್ದಾರೆ. ಅತ್ತ ಪೆಂಟಗನ್‌, ʻ1944ರ ಮೇ14 ರಂದು ಪತನಗೊಂಡ ವಿಮಾನದಿಂದ ಪಿನ್ನೆಗನ್‌ ಅವ್ರ ಶವದ ಅವಶೇಷಗಳು ಇಲ್ಲಿವರೆಗೆ ಪತ್ತೆಯಾಗಿಲ್ಲʼ ಅಂತ ಸ್ಪಷ್ಟನೆ ನೀಡಿದೆ.

-masthmagaa.com

Contact Us for Advertisement

Leave a Reply